ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

ಬುಧವಾರ, 1 ಜೂನ್ 2016 (12:22 IST)
ಕೇವಲ ಒಂದೇ ತಿಂಗಳಲ್ಲಿ ಮೂರು ಬಾರಿ ತೈಲ ದರ ಏರಿಕೆಯಾಗಿದ್ದು, ಮಂಗಳವಾರ ತೈಲ ಕಂಪೆನಿಗಳು ಪೆಟ್ರೋಲ್ ದರದಲ್ಲಿ 2.58 ರೂಪಾಯಿ ಮತ್ತು ಡಿಸೇಲ್ ದರದಲ್ಲಿ 2.26 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ.
 
ಈ ಪರಿಷ್ಕೃತ ದರ ನಿನ್ನೆ ಮಧ್ಯ ರಾತ್ರಿಯಿಂದ ಜಾರಿಯಾಗಿದೆ ಎಂದು ತೈಲ ಕಂಪೆನಿಗಳ ಮೂಲಗಳು ತಿಳಿಸಿವೆ.
 
 ತೈಲ ಕಂಪೆನಿಯ ಈ ನೂತನ ದರದಿಂದ ರಾಜಧಾನಿ ದೆಹಲಿಯಲ್ಲಿ ರಾಜ್ಯ ತೆರಿಗೆ ಸೇರಿದಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 65.60 ರೂಪಾಯಿ ಮತ್ತು ಪ್ರತಿ ಲೀಟರ್ ಡಿಸೇಲ್ ಬೆಲೆ 53.93 ರೂಪಾಯಿಗೆ ತಲುಪಲಿದೆ.
 
ಅಂತಾರಾಷ್ಟ್ರೀಯ ಉತ್ಪನ್ನ ಬೆಲೆಯಲ್ಲಿ ಡಾಲರ್ ಎದುರಿಕೆ ರಹಾಯಿ ಮೌಲ್ಯ ಕುಸಿತ ಕಂಡಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ದರದ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಯನ್ ಆಯಲ್ ಕಾರ್ಪೊಲೇಶನ್ ಹೇಳಿದೆ. 
 
ಅಂತರಾಷ್ಟ್ರೀಯ ತೈಲ ಮಾರುಕಟ್ಟೆ ಬೆಳವಣಿಗೆ ನೋಡಿಕೊಂಡು ಸರಕಾರಿ ಒಡೆತನದ ಐಓಸಿ, ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಎಲ್‌ಟಿಡಿ ಮತ್ತು ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೊರೇಶನ್ ಎಲ್‌ಟಿಡಿ, ಪ್ರತಿ ತಿಂಗಳು 1 ಮತ್ತು 16 ರಂದು ತೈಲದರವನ್ನು ನಿಗದಿಪಡಿಸುತ್ತವೆ.
 
ಮೇ 17 ರಂದು ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕ್ರಮವಾಗಿ 83 ಪೈಸೆ ಮತ್ತು 1.26 ರೂಪಾಯಿ ಹೆಚ್ಚಳ ಮಾಡಿದ್ದು, ಮೇ 1 ರಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ 1.06 ಮತ್ತು 2.94 ರೂಪಾಯಿ ಹೆಚ್ಚಳ ಮಾಡಿದ್ದವು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ