2013 ರ ಸಾಲಿನಿಂದ ಪೆಟ್ರೋಲ್ ದರ 32 ಬಾರಿ ಕಡಿಮೆಯಾಗಿ 21 ಬಾರಿ ಹೆಚ್ಚಳವಾಗಿದೆ: ನಿರ್ಮಲಾ ಸೀತಾರಾಮನ್
ಸೋಮವಾರ, 9 ಮೇ 2016 (19:30 IST)
ದೇಶದಲ್ಲಿ 2013 ರ ಸಾಲಿನಿಂದ ಪೆಟ್ರೋಲ್ ದರ 32 ಬಾರಿ ಕಡಿಮೆಯಾಗಿ 21 ಬಾರಿ ಹೆಚ್ಚಳವಾಗಿದ್ದು, ಡೀಸೆಲ್ ದರ 19 ಬಾರಿ ಕಡಿಮೆಯಾಗಿ 28 ಬಾರಿ ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
"ಅಂದಿನಿಂದ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮತ್ತು ಇತರ ಮಾರುಕಟ್ಟೆಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ತೈಲ ಬೆಲೆ ಕುರಿತು ಸಮರ್ಪಕವಾದ ನಿರ್ಧಾರ ತೆಗೆದುಕೊಂಡಿವೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಸೀತಾರಾಮನ್ ಹೇಳಿದ್ದಾರೆ.
2013 ರ ಏಪ್ರಿಲ್ ತಿಂಗಳಿಂದ ದೇಶದಲ್ಲಿ ಪೆಟ್ರೋಲ್ ದರ 32 ಬಾರಿ ಕಡಿಮೆಯಾಗಿ 21 ಬಾರಿ ಹೆಚ್ಚಳವಾಗಿದ್ದು, ಡೀಸೆಲ್ ದರ 19 ಬಾರಿ ಕಡಿಮೆಯಾಗಿ 28 ಬಾರಿ ಹೆಚ್ಚಳವಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಪಿಡಿಎಸ್ ಸೀಮೆಎಣ್ಣೆ ಮತ್ತು ಸಬ್ಸಿಡಿ ಎಲ್ಪಿಜಿ ದರದಲ್ಲಿ 2011 ರ ಜೂನ್ 25 ರಿಂದ ಪರಿಣಾಮಕಾರಿಯಾಗಿ ಬೆಲೆ ಏರಿಕೆಯಾಗಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.
ಸೀತಾರಾಮನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅಸ್ಥಿರವಾಗಿರುವುದರಿಂದ ಕಚ್ಚಾ ತೈಲ ಪೂರೈಕೆ ಮತ್ತು ಬೇಡಿಕೆಗಳ ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.