ರಾಜ್ಯಸಭೆಯಲ್ಲಿ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರ

ಗುರುವಾರ, 6 ಏಪ್ರಿಲ್ 2017 (20:00 IST)
ರಾಜ್ಯಸಭೆಯಲ್ಲಿ ಯಾವುದೇ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರವಾಗಿದೆ.
 
ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ಜಿಎಸ್‌ಟಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ ಸಂಸದರು ಅಂಗೀಕಾರ ಸೂಚಿಸಿದರು. ಇದರೊಂದಿಗೆ ಜುಲೈ 1 ರಿಂದ ಜಿಎಸ್‌ಟಿ ಮಸೂದೆ ಜಾರಿಗೆ ಬರಲಿದೆ.
 
 ದೇಶಾದ್ಯಂತ ಏಕರೂಪದ ದಂಡ ಮತ್ತು ತೆರಿಗೆ ಸಂಗ್ರಹಿಸುವ ಕಾನೂನು ಇದಾಗಿದ್ದು, ತೆರಿಗೆ ಪಾವತಿದಾರರ ಬವಣೆ ತಪ್ಪಿಸಿದಂತಾಗಿದೆ. ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ನಂತರ ಆಯಾ ರಾಜ್ಯಗಳ ವಿಧಾನಸಭೆಗಳಲ್ಲೂ ಜಿಎಸ್‌ಟಿ ಮಸೂದೆಗೆ ಅಂಗೀಕಾರ ಪಡೆಯಬೇಕಾಗುತ್ತದೆ.
 
ಏಕರೂಪ ತೆರಿಗೆ ಜಾರಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆ ಕಾಣಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ