ಎಕ್ಸಿಸ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸುವ ವರದಿ ತಳ್ಳಿಹಾಕಿದ ಆರ್‌ಬಿಐ

ಮಂಗಳವಾರ, 13 ಡಿಸೆಂಬರ್ 2016 (15:28 IST)
ಕೇಂದ್ರ ಸರಕಾರ ಎಕ್ಸಿಸ್ ಬ್ಯಾಂಕ್‍ ಪರವಾನಿಗಿ ರದ್ದುಗೊಳಿಸುವ ಕುರಿತಂತೆ ಪರಿಗಣನೆ ನಡೆಸುತ್ತಿದೆ ಎಂದು ಪ್ರಾದೇಶಿಕ ಪತ್ರಿಕೆಯಲ್ಲಿ ವರದಿಯಾಗಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ಪತ್ರಿಕೆಯಲ್ಲಿ ವರದಿಯಾಗಿರುವ ಸುದ್ದಿ ಆಧಾರರಹಿತವಾಗಿದ್ದು, ಬ್ಯಾಂಕ್ ಆರ್‌ಬಿಐ ನಿಗದಿಪಡಿಸಿದ ನಿಯಮಗಳನ್ನು ಪಾಲಿಸುತ್ತದೆ. ಯಾವುದೇ ಕಾರಣಕ್ಕೂ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ರಾಜೇಶಿ ದಹಿಯಾ ಸ್ಪಷ್ಟಪಡಿಸಿದ್ದಾರೆ.
 
ಉದ್ಯಮದ ಶ್ರೇಷ್ಠ  ಕಾರ್ಪೋರೇಟ್ ನೀತಿಗಳನ್ನು ಪಾಲಿಸುವುದಲ್ಲದೇ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದರಲ್ಲಿ ಶೂನ್ಯ ತಾಳ್ಮೆಯನ್ನು ಬ್ಯಾಂಕ್ ಹೊಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎನ್ನುವುದೇ ಬ್ಯಾಂಕ್‌ನ ಮೂಲ ಉದ್ದೇಶವಾಗಿದೆ ಎನ್ನುವ ಬಗ್ಗೆ  ಹೂಡಿಕೆದಾರರು, ಗ್ರಾಹಕರು ಮತ್ತು ಇತರ ಸದಸ್ಯರಿಗೆ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. 
 
ಎಕ್ಸಿಸ್ ಬ್ಯಾಂಕ್‌ನ ಕೆಲ ಶಾಖೆಗಳಲ್ಲಿ ಹಣ ಠೇವಣಿ ಮತ್ತು ಹಣ ಬದಲಾವಣೆಯಲ್ಲಿ ಕೆಲ ಅವ್ಯವಹಾರಗಳು ನಡೆದಿವೆ ಎನ್ನುವ ವರದಿಗಳು ಬಹಿರಂಗವಾಗಿದ್ದರೂ ಎಕ್ಸಿಸ್ ಬ್ಯಾಂಕ್‌ನ ಲೈಸೆನ್ಸ್ ರದ್ದುಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ