ಜಿಯೋ ಆಫರ್ ಮಾರ್ಚ್ ಬಳಿಕ ಮತ್ತೆ ವಿಸ್ತರಣೆ?

ಭಾನುವಾರ, 11 ಡಿಸೆಂಬರ್ 2016 (12:26 IST)
ಉಚಿತ ಕರೆ, ಅನಿಯಮಿತ ಡಾಟಾ ಪ್ಲಾನ್‌ನೊಂದಿಗೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ರಿಯಲಯನ್ಸ್ ಜಿಯೋ ತನ್ನ ಉಚಿತ ಸೇವೆಗಳನ್ನು ಮಾರ್ಚ್‌ವರೆಗೂ ವಿಸ್ತರಿಸಿದ್ದು ಗೊತ್ತಿರುವ ಸಂಗತಿ. ಡಿಸೆಂಬ‌ರ್‌ಗೆ ಮುಗಿಯಲಿರುವ ಪ್ಲಾನನ್ನು ’ಹ್ಯಾಪಿ ನ್ಯೂ ಇಯರ್’ ಆಫರ್‌ನೊಂದಿಗೆ ಮುಂದುವರಿಸಲಿದೆ.
 
ಈ ಹಿನ್ನೆಲೆಯಲ್ಲಿ ಜಿಯೋ ಮತ್ತೊಂದು ಭರ್ಜರಿ ಪ್ರಕಟಣೆ ಮಾಡುವ ನಿರೀಕ್ಷೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಮಾರ್ಚ್ ಬಳಿಕ ಸಹ ಇನ್ನಷ್ಟು ದಿನ ಉಚಿತ ಸೇವೆಯನ್ನು ವಿಸ್ತರಿಸಬಹುದು ಎಂದು ಭಾವಿಸಿದ್ದಾರೆ. ಮಾರುಕಟ್ಟೆಯಲ್ಲಿನ ದರ ಸಮರವೇ ಇದಕ್ಕೆ ಕಾರಣ ಎನ್ನಲಾಗಿದೆ. 
 
4ಜಿ ಸೇವೆಯಲ್ಲಿ ಅತ್ಯಧಿಕ ಬಳಕೆದಾರರನ್ನು ಪಡೆಯಲು ಈ ನಿರ್ಧಾರಕ್ಕೆ ಬರಲು ಕಾರಣ ಎನ್ನುತ್ತಿವೆ ಮೂಲಗಳು. ಇದುವರೆಗೂ ಜಿಯೋ ಹೊಡೆತಕ್ಕೆ ಏರ್‌ಟೆಲ್, ವೊಡಾಫೋನ್, ಐಡಿಯಾ  ಕಂಪನಿಗಳು ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳಲು ಕೆಲವು ಪ್ಲಾನ್‌ಗಳನ್ನು ಪರಿಚಯಿಸಿವೆ. ಅನಿಯಮಿತ ಕರೆಗಳ ಜೊತೆಗೆ ಡಾಟಾ ಪ್ಯಾಕ್‌ಗಳನ್ನೂ ಪ್ರಕಟಿಸಿವೆ. 
 
ಹಾಗಾಗಿ ಜಿಯೋ ಕೂಡ ಇನ್ನಷ್ಟು ದಿನ ಉಚಿತ ವಾಯ್ಸ್ ಕಾಲ್ ಕೊಡುವ ಸಾಧ್ಯತೆಗಳಿವೆ. ಇನ್ನೊಂದು ಬೆಳವಣಿಗೆಯಲ್ಲಿ ಏರ್‌ಟೆಲ್ ಫ್ರೀ ವಾಯ್ಸ್ ಕಾಲ್ಸ್ ದರಪಟ್ಟಿಯನ್ನು ಪ್ರಕಟಿಸಿದೆ. ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ನಾನಾ ತರಹದ ಯೋಜನೆಗಳನ್ನು ರೂಪಿಸುತ್ತಿರುವುದು ಜಿಯೋ ಉಚಿತ ಸೇವೆ ವಿಸ್ತರಣೆಗೆ ಕಾರಣ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ