ಕಾಳಸಂತೆಯಲ್ಲಿ 500 ರೂ.ಗಳಿಗೆ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಮಾರಾಟ

ಸೋಮವಾರ, 17 ಅಕ್ಟೋಬರ್ 2016 (16:13 IST)
ರಿಲಯನ್ಸ್ ಜಿಯೋ ಸಿಮ್ ಡೇಟಾ ವೇಗ ನಿಧಾನವಾಗುತ್ತಿದೆ ಎನ್ನುವ ವರದಿಗಳ ಮಧ್ಯೆ, ಕಂಪೆನಿ ಉಚಿತವಾಗಿ ಸಿಮ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳುತ್ತಿದೆಯಾದರೂ ಜಿಯೋ ಸಿಮ್ 50 ರೂ.ಗಳಿಂದ 500 ರೂ,ಗಳವರೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಆಘಾತಕಾರಿ ವರದಿಗಳು ಬಹಿರಂಗವಾಗುತ್ತಿವೆ.
 
ರಿಲಯನ್ಸ್ ಜಿಯೋ ಸಂಸ್ಥೆ ಉಚಿತ 4ಜಿ ಸಿಮ್, ಅನಿಯಮಿತ ಉಚಿತ ಎಚ್‌ಡಿ ವೈಸ್ ಮತ್ತು ವಿಡಿಯೋ ಕರೆ ಹಾಗೂ ಅನಿಯಮಿತ (100 ಉಚಿತ ಎಸ್‌ಎಂಎಸ್) ಎಸ್‌ಎಂಎಸ್ ಮತ್ತು 135 ಎಂಬಿಪಿಎಸ್ ಡೇಟಾ ನೀಡುವುದಾಗಿ ಘೋಷಿಸಿತ್ತು. 
 
ವರದಿಗಳ ಪ್ರಕಾರ, ಕೆಲ ರಿಲಯನ್ಸ್ ಜಿಯೋ ಸಿಮ್ ಮೊಬೈಲ್ ರಿಟೇಲ್ ವರ್ತಕರು ಹೆಚ್ಚಿನ ಲಾಭ ಮಾಡಿಕೊಳ್ಳುವ ಹುನ್ನಾರದಿಂದ ಕಾಳಸಂತೆಯಲ್ಲಿ ಜಿಯೋ ಸಿಮ್‌‍ನ್ನು 50 ರಿಂದ 500 ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ