ಕೇವಲ ರೂ.999ಕ್ಕೆ ಜಿಯೋ 4ಜಿ ಮೊಬೈಲ್ ಫೋನ್

ಶುಕ್ರವಾರ, 13 ಜನವರಿ 2017 (11:38 IST)
ಉಚಿತ ಕರೆ, ಡಾಟಾ ಕಾಲ್ಸ್‌ನೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಸಂಚಲನ ಮೂಡಿಸಿದೆ. ಇನ್ನಷ್ಟು ಮಂದಿ ಗ್ರಾಹಕರನ್ನು ಸೆಳೆಯಲು 4ಜಿ ವೋಲ್ಟ್ (ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಷನ್) ಸೌಲಭ್ಯವುಳ್ಳ ಫೀಚರ್ ಫೋನುಗಳನ್ನು ಅತ್ಯಂತರ ಕಡಿಮೆ ಬೆಲೆಗೆ ಬಿಡುಗಡೆ ಮಾಡುತ್ತಿದೆ.
 
ಇವುಗಳ ಬೆಲೆ ಕೇವಲ ರೂ.999 ರಿಂದ ರೂ.1500ರ ನಡುವೆ ಇರಲಿದೆ. ಎರಡು ಭಿನ್ನ ಶೈಲಿಯ 4ಜಿ ವೋಲ್ಡ್ ಫೋನ್‌ಗಳನ್ನು ತರಲು ಕಂಪೆನಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಹಿಂಬದಿ ಮತ್ತು ಮುಂಬದಿ ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ. 
 
ಸದ್ಯಕ್ಕೆ 4ಜಿ ವೋಲ್ಟ್ ಸೌಲಭ್ಯಗಳುಳ್ಳ ಸ್ಮಾರ್ಟ್ ಫೋನ್ ಆರಂಭಿಕ ಬೆಲೆ ರೂ.3,500-4000ರಷ್ಟಿದೆ. ಆದರೆ ರಿಲಯನ್ಸ್ ಬಿಡುಗಡೆ ಮಾಡಲಿರುವ ಫೀಚರ್ ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಉಚಿತ ಕರೆ, ಡಾಟಾ ಸೌಲಭ್ಯವುಳ್ಳ ರಿಲಯನ್ಸ್ ಹ್ಯಾಪಿ ನ್ಯೂ ಇಯರ್ ಆಫರ್ ಮಾರ್ಚ್ 31ರವರೆಗೆ ಮುಂದುವರಿಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ