ಬ್ಯಾಂಕ್ ಸೇರಿದ ಹಳೆ ನೋಟುಗಳೆಷ್ಟು ಅಂತ ಗೊತ್ತಾ?

ಗುರುವಾರ, 15 ಡಿಸೆಂಬರ್ 2016 (08:02 IST)
ಅಧಿಕ ಮೌಲ್ಯದ ನೋಟುಗಳ ನಿಷೇಧದ ಬಳಿಕ ವಿವಿಧ ಬ್ಯಾಂಕ್‌ಗಳಲ್ಲಿ ರೂ.12.44 ಲಕ್ಷ ಕೋಟಿ ಜಮೆಯಾಗಿದೆ ಎಂದ್ದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಡಿಸೆಂಬರ್ 10ರವರೆಗೂ ಈ ಮೊತ್ತ ಜಮೆಯಾಗಿದೆ ಎಂದು ತಿಳಿಸಿದೆ. 
 
ಇನ್ನು ರೂ.4.61 ಲಕ್ಷ ಕೋಟಿ ಹೊಸ ನೋಟುಗಳು ಚಲಾವಣೆಗೆ ತಂದಿರುವುದಾಗಿ ಹೇಳಿದೆ. ರೂ. 500, 1000 ನೋಟುಗಳು ರದ್ದಾದ ಬಳಿಕ ಬ್ಯಾಂಕ್‍ಗಳಿಗೆ ಬಂದ ಆ ನೋಟುಗಳ ಒಟ್ಟಾರೆ ಮೌಲ್ಯ ರೂ. 12.44 ಕೋಟಿ. ಎಟಿಎಂಗಳು ಮತ್ತು ಬ್ಯಾಂಕಿನ ಕ್ಯಾಶ್ ಕೌಂಟರ್‌ಗಳ ಮೂಲಕ ರೂ.4.61 ಲಕ್ಷ ಕೋಟಿ ಹೊಸ ನೋಟುಗಳನ್ನು ಚಲಾವಣೆ ಮಾಡಿರುವುದಾಗಿ ಆರ್‌ಬಿಐ ಉಪ ಗವರ್ನರ್ ಆರ್ ಗಾಂಧಿ ತಿಳಿಸಿದ್ದಾರೆ.
 
ಸದ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ 21.8 ಶತಕೋಟಿ ಎಂದೂ, ಇವುಗಳಲ್ಲಿ ರೂ.10, 20,50, 100 ನೋಟುಗಳ ಸಂಖ್ಯೆ 20.1 ಶತಕೋಟಿಯಷ್ಟಿದ್ದು, ಹೊಸ ರೂ.500, 2,000 ನೋಟುಗಳ ಸಂಖ್ಯೆ 1.7 ಶತಕೋಟಿ ಎಂದು ಗಾಂಧಿ ವಿವರ ನೀಡಿದ್ದಾರೆ. ಇನ್ನು ಜಮೆಯಾಗಿರುವ ಹಳೆ ನೋಟುಗಳ ಸಂಖ್ಯೆ 1 ಲಕ್ಷ ಕೋಟಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ