ಹೊಸ ನೋಟುಗಳ ಸಂಖ್ಯೆ ರೂ. 4.27 ಲಕ್ಷ ಕೋಟಿ

ಶನಿವಾರ, 10 ಡಿಸೆಂಬರ್ 2016 (10:35 IST)
ಅಧಿಕ ಮೌಲ್ಯದ ನೋಟುಗಳನ್ನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೂ. 4,27,684 ಕೋಟಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. 
 
ನವೆಂಬರ್ 10ರಿಂದ ಡಿಸೆಂಬರ್ 7ರವರೆಗಿನ ಅವಧಿಯಲ್ಲಿ ಈ ನೋಟುಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಬ್ಯಾಂಕುಗಳಲ್ಲಿನ ಕ್ಯಾಶ್ ಕೌಂಟರ್ ಅಥವಾ ಎಟಿಎಂಗಳ ಮೂಲಕ ಇವರನ್ನು ಸರಬರಾಜು ಮಾಡಲಾಗಿದೆ. 
 
ನೋಟು ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದ್ದೇವೆಂದು, ಆದಷ್ಟು ಬೇಗ ಸಮಸ್ಯೆಯನ್ನು ಪರಿಷ್ಕರಿಸುವುದಾಗಿ ಆರ್‍‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ. ಏತನ್ಮಧ್ಯೆ ಪ್ಲಾಸ್ಟಿಕ್ ನೋಟುಗಳನ್ನು ತರುವುದಾಗಿಯೂ ಸರಕಾರ ಹೇಳಿದೆ. ಪ್ಲಾಸ್ಟಿಕ್ ನೋಟುಗಳು ಕಾಗದ ನೋಟಿಗಿಂತಲೂ ಶುದ್ಧವಾಗಿರುತ್ತವೆ. ಹಾಗೆಯೇ ಇವುಗಳ ಜೀವಿತಾವಧಿ ಕೇವಲ ಐದು ವರ್ಷ. ಇದಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ