ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿಯಾಗಲಿರುವ ಸತ್ಯ ನಾದೆಳ್ಳ

ಮಂಗಳವಾರ, 13 ಡಿಸೆಂಬರ್ 2016 (11:57 IST)
ಅಮೆರಿಕಾ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿರುವ ಟಾಪ್ ಟೆಕ್ನಾಲಜಿ ಎಗ್ಸಿಕ್ಯೂಟೀವ್‌ಗಳಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಳ ಸಹ ಇದ್ದಾರೆ. ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಆಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್, ಅಲ್ಪಾಬೆಟ್ ಸಿಇಓ ಲಾರಿ ಪೇಜ್, ಫೇಸ್‌ಬುಕ್ ಸಿಇಓ ಶೆರಿಲ್ ಶಾಂಡ್‌ಬರ್ಗ್, ಮೈಕ್ರೋಸಾಫ್ಟ್ ಸಿಇಓ ಸತ್ಯ ನಾದೆಳ್ಳ, ಇಂಟೆಲ್ ಸಿಇಓ ಬ್ರಿಯಾನ್ ಕ್ರಜಾನಿಚ್ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಎನ್ ಹೇಳಿದೆ.
 
ಒರಾಕಿಲ್ ಕಾರ್ಪೊರೇಶನ್, ಅಮೆಜಾನ್.ಕಾಮ್, ಐಬಿಎಂ ಸೇರಿದಂತೆ ಇತರೆ ಕಂಪನಿ ಅಧಿಕಾರಿಗಳು ಸಹ ಈ ಸಭೆಯಲ್ಲಿ ಪಾಲ್ಗೂಳ್ಳುವ ಸಾಧ್ಯತೆ ಇದೆ. ವಸಲೆ ನೀತಿಗಳು, ಎನ್‌ಕ್ರಿಪ್ಷನ್, ಇತರೆ ಸಾಮಾಜಿಕ ಅಂಶಗಳು ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಈ ಭೇಟಿಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆಯಂತೆ.
 
ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ, ಊಬರ್ ಸಿಬಿಓ ಟಾವಿಸ್ ಕಲಾನಿಕ್, ನೆಟ್‌ಫ್ಲಿಕ್ಸ್ ಸಿಇಓ ರಿಡ್ ಹೇಸ್ಟಿಂಗ್ಸ್, ಇನ್ವೆಷ್ಟರ್ ಮಾರ್ಕ್ ಕ್ಯೂಬನ್, ಎಚ್‍ಪಿ ಸಿಇಓ ಮೆಗಾ ವಿಟ್‍ಮ್ಯಾನ್, ಸೇಲ್ಸ್ ಫೋರ್ಸ್ ಸಿಇಓ ಮಾರ್ಕ್ ಬೆನಿಯಾಫ್ ಮುಂತಾದವರು ಈ ಸಭೆಗೆ ಹಾಜರಾಗುತ್ತಿಲ್ಲ ಎಂದು ರೀಕೋಡ್ ಅನ್ನೋ ತಂತ್ರಜ್ಞಾನ ಸುದ್ದಿತಾಣ ಹೇಳಿದೆ. ಇವರ ಗೈರಿಗೆ ಅವರಿಗೆ ಆಹ್ವಾನ ಇಲ್ಲವೋ ಅಥವಾ ಬೇರೆ ಕಾರಣಳೇನಾದರೂ ಇದೆ ಎಂಬುದು ಗೊತ್ತಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ