ನಿಷೇಧಗೊಂಡಿರುವ ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡಲಿದೆಯೇ ಸರ್ಕಾರ...?

ಮಂಗಳವಾರ, 4 ಜುಲೈ 2017 (15:23 IST)
ನಿಷೇಧಗೊಂಡಿರುವ ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡಲಿದೆಯೇ ಸರ್ಕಾರ...?
ನವದೆಹಲಿ:ಅಮಾನ್ಯಗೊಂಡಿರುವ 500 ಹಾಗೂ 1000 ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಜಮೆ ಮಾಡಲು ಇನ್ನೊಂದು ಅವಕಾಶವನ್ನು ನೀಡಬಾರದೇಕೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.
 
ನಿಷೇಧಗೊಂಡಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗೆ ಜಮೆ ಮಾಡುವುದಕ್ಕೆ ಸರಕಾರ ಕಳೆದ ವರ್ಷ ಡಿಸೆಂಬರ್‌ 31ರ ವರೆಗೆ ಕಾಲಾವಕಾಶ ನೀಡಿತ್ತು. ಅನಂತರ ಮಾಚ್‌ 31ರ ವರೆಗಿನ ಕಾಲಾವಕಾಶದಲ್ಲಿ ಆರ್‌ಬಿಐ ನಲ್ಲಿ ವಿನಿಮಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಇವೆಲ್ಲ ಅವಕಾಶಗಳ ಹೊರತಾಗಿಯೂ ಸಮರ್ಥನೀಯ ಹಾಗೂ ಸರಿಯಾದ ಕಾರಣಗಳಿಗಾಗಿ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ವಿಫ‌ಲರಾದವರಿಗೆ ಇನ್ನೂ ಒಂದು ಅವಕಾಶವನ್ನು ನೀಡಲು ಸಾಧ್ಯವೇ ಎಂಬುದನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಕೇಳಿದೆ.
 
ಹಳೆಯ ನೋಟುಗಳ ಬದಲಾವಣೆಗೆ ಅವಕಾಶ ನೀಡುವ ಬಗ್ಗೆ 2 ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಗೆ ನ್ಯಾಯಾಲಯ ಸೂಚನೆ ನೀಡಿದೆ.
 

ವೆಬ್ದುನಿಯಾವನ್ನು ಓದಿ