ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ಸೋಮವಾರ, 10 ಜುಲೈ 2017 (14:37 IST)
ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ಮಂದಿ ಗ್ರಾಹಕರಾದರು. ಆದರೆ ಆ ಗ್ರಾಹಕರು ಶಾಕ್ ಆಗುವ ಸುದ್ದಿ ಬಂದಿದೆ.

 
ರಿಲಯನ್ಸ್ ಜಿಯೋ ಸಂಸ್ಥೆಯ ಗ್ರಾಹಕರ ವೈಯಕ್ತಿಕ ವಿವರಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ಹ್ಯಾಕರ್ ಗಳ ಹಾವಳಿ ಎಂದು ಶಂಕಿಸಲಾಗಿದೆ. ಆದರೆ ಸಂಸ್ಥೆ ಇದಕ್ಕೆ ಸ್ಪಷ್ಟನೆ ನೀಡಿದ್ದು, ಡಾಟಾಬೇಸ್ ಉಲ್ಲಂಘನೆಯಾಗಿಲ್ಲ ಎಂದಿದೆ.

ಆದರೆ ಭಾನುವಾರ ಟ್ವಿಟರ್ ನಲ್ಲಿ ವೆಬ್ ಸೈಟ್ ಒಂದರ ವಿಳಾಸ ಓಡಾಡುತ್ತಿತ್ತು. ಇದನ್ನು ಓಪನ್ ಮಾಡಿದರೆ ಗ್ರಾಹಕರ ವೈಯಕ್ತಿಕ ವಿವರಗಳನ್ನು ತಿಳಿಯಬಹುದಾಗಿತ್ತು. ಇದರಲ್ಲಿ ರಿಲಯನ್ಸ್ ಜಿಯೋ ಗ್ರಾಹಕರ  ಸಂಪೂರ್ಣ ವಿಳಾಸ, ಫೋನ್ ನಂಬರ್ ನೋಡಬಹುದಾಗಿತ್ತು. ಆದರೆ ತಕ್ಷಣವೇ ಆ ವೆಬ್ ಸೈಟ್ ನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಗ್ರಾಹಕರು ಕೊಂಚ ಮಟ್ಟಿಗೆ ನಿರಾಳವಾಗಬಹುದಾಗಿದೆ.

ಈ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹೇಳಿಕೆ ನೀಡಿದ್ದು, ಗ್ರಾಹಕರ ವಿವರಗಳು ಸುರಕ್ಷಿತವಾಗಿದೆ ಎಂದಿದೆ. ಇಂತಹದ್ದೊಂದು ಎಡವಟ್ಟಿನ ವೆಬ್ ಸೈಟ್ ನ ವಿವರಗಳ ಕುರಿತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ.. ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತಾ?’

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ