ಸ್ನಾಪ್‍ಡೀಲ್‌ನಲ್ಲಿ ಶೇ.30ರಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್

ಭಾನುವಾರ, 12 ಫೆಬ್ರವರಿ 2017 (05:57 IST)
ಪ್ರಮುಖ ಇ-ಕಾಮರ್ಸ್ ಕಂಪೆನಿ ಸ್ನಾಪ್‌ಡೀಲ್ ಶೇ.30ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಂಬರುವ ಎರಡು ತಿಂಗಳಲ್ಲಿ ಶೇ.30ರಷ್ಟು ಉದ್ಯೋಗಿಗಳನ್ನು ತೆಗೆಯಲು ಈಗಾಗಲೆ ಪ್ರಯತ್ನಗಳನ್ನು ಶುರು ಮಾಡಿದೆ. 
 
ಖರ್ಚುಗಳನ್ನು ಕಡಿತ ಮಾಡಿಕೊಳ್ಳುವ ಸಲುವಾಗಿ ಸ್ನಾಪ್‌ಡೀಲ್ ಈ ಪ್ರಯತ್ನವನ್ನು ಮಾಡುತ್ತಿರುವುದಾಗಿ ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 1,000 ಮಂದಿ ಸಂಸ್ಥೆ ಉದ್ಯೋಗಿಗಳ ಮೇಲೆ ನೇರ ಪ್ರಭಾವ ಬೀರುತ್ತಿದ್ದು, ಲಾಜಿಸ್ಟಿಕ್ ವಿಭಾಗದಲ್ಲಿ ಕೆಲಸ ಮಾಡುವ ಸಾವಿರಾರು ಒಪ್ಪಂದ ಉದ್ಯೋಗಿಗಳ ಮೇಲೆ ಪರೋಕ್ಷ ಪ್ರಭಾವ ಬೀರಲಿದೆ.
 
ವ್ಯಾಲುಯೇಷನ್ ಕಡಿಮೆಯಾಗಲು, ಬಂಡವಾಳ ಕ್ಷೀಣಿಸಿದ ಕಾರಣ ಸ್ನಾಪ್‌ಡೀಲ್ ಬಿಕ್ಕಟ್ಟಿನಲ್ಲಿ ಸಿಕ್ಕಿಬಿತ್ತು. ಹಾಗಾಗಿ ಉದ್ಯೋಗಿಗಳ ಭೇಟೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ನಾಪ್‌ಡೀಲ್ ಟೀಂ ಮ್ಯಾನೇಜರ್‌ಗಳಿಗೆ ಇ-ಮೇಲ್ ಕಳುಹಿಸಿದೆ. ಕಳೆದ ವರ್ಷ ಸ್ನಾಪ್‌ಡೀಲ್ ಸುಮಾರು 200 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ