ಬೆಂಗಳೂರು: ದೇಶದ ಮುಂಚೂಣಿ ಟೆಲಿಕಾಂ ಸಂಸ್ಥೆ ಟಾಟಾ ಡೊಕೊಮೊ ಕರ್ನಾಟಕ ಮಾರುಕಟ್ಟೆಯ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಒಂದು ವಿನೂತನವಾದ ಡಾಟಾ ಯೋಜನೆ ಪ್ರಕಟಿಸಿದೆ. ಮೈ ಬೆಸ್ಟ್ ಆಫರ್(ಎಂಬಿಒ) ಎಂಬ ಈ ಯೋಜನೆಯಡಿ ಪ್ರತಿ ಒಂದು ಜಿಬಿಗೆ 91 ರೂಪಾಯಿಯಿಂದ ಆರಂಭವಾಗುವ ಡಾಟಾ ಪ್ಯಾಕ್ ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವುದೇ ಗೌಪ್ಯ ಶುಲ್ಕ ಅಥವಾ ಇನ್ನಾವುದೇ ಶುಲ್ಕ ಇರುವುದಿಲ್ಲ.
ಗ್ರಾಹಕರು 91 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ 1 ಜಿಬಿ ಡಾಟಾ ಪಡೆಯಲಿದ್ದಾರೆ. ಅದೇ ರೀತಿ, 182 ರೂಪಾಯಿಗಳಿಗೆ 2 ಜಿಬಿ ಮತ್ತು 273 ರೂಪಾಯಿಗೆ 3 ಜಿಬಿ ಡಾಟಾ ಪಡೆಯಬಹುದಾಗಿದೆ. ಈ ಹೊಸ ಸೇವೆಗಳ ಮಾಹಿತಿಗಾಗಿ ಗ್ರಾಹಕರು *123# ಗೆ ಕರೆ ಮಾಡಬಹುದಾಗಿದೆ.
'ಗುಣಮಟ್ಟದ ಡಾಟಾ ಸೇವೆಗಳಿಗೆ ಹೆಚ್ಚಿದ ಬೇಡಿಕೆ ಪರಿಣಾಮ ಮಾರುಕಟ್ಟೆಯಲ್ಲಿ ಕೆಲವೊಂದು ಗೌಪ್ಯ ದರಗಳೂ ಒಳಗೊಂಡಂತೆ ಡಾಟಾ ಉತ್ಪನ್ನಗಳ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ. ಆದರೆ, ಟಾಟಾ ಡೊಕೊಮೊ ಪಾರದರ್ಶಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರಲ್ಲಿ ಬದ್ಧತೆ, ವಿಶ್ವಾಸವನ್ನೂ ಹೊಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ಗೌಪ್ಯ ಶುಲ್ಕಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ ಅಥವಾ ಆತಂಕಪಡಬೇಕಿಲ್ಲ. ಈ ಹೊಸ ಡಾಟಾ ಆಫರ್ ನಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡ ಪ್ಲಾನ್ ಗೆ ಅನುಗುಣವಾಗಿ ಡಾಟಾ ಪಡೆಯಲಿದ್ದಾರೆ. ಈ ನಮ್ಮ ಹೊಸ ಡಾಟಾ ಯೋಜನೆಯಿಂದ ಗ್ರಾಹಕರು ಸಂತುಷ್ಟರಾಗುತ್ತಾರೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಟೆಲಿ ಸರ್ವಿಸಸ್ ಲಿಮಿಟೆಡ್ ನ ಕರ್ನಾಟಕ-ಕೇರಳ ವೃತ್ತದ ಗ್ರಾಹಕ ವ್ಯವಹಾರಗಳ ಮುಖ್ಯಸ್ಥ ಬಾಲಾಜಿ ಪ್ರಕಾಶ್ ಹೇಳುತ್ತಾರೆ.
ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಇಂಟರ್ನೆಟ್ ಬಳಕೆ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅನುಗುಣವಾಗಿ ಅವರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಟಾಟಾ ಡೊಕೊಮಾ ಆವಿಷ್ಕಾರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಕಂಪನಿ ಕೈಗೆಟುಕುವ ದರದಲ್ಲಿ ವಾಯ್ಸ್ ಪ್ಲಾನ್, ಡಾಟಾ ಪ್ಲಾನ್, ಮೌಲ್ಯಕ್ಕೆ ತಕ್ಕಂತೆ ಕಾಂಬೋ ಪ್ಯಾಕ್, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ವಿಶೇಷ ಯೋಜನೆಗಳು, ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಈ ಎಲ್ಲಾ ಸೇವೆಗಳು ಗ್ರಾಹಕ ಸ್ನೇಹಿಯಾಗಿದ್ದು, ಪ್ರತಿಯೊಬ್ಬ ಗ್ರಾಹಕರ ಹಿತವನ್ನು ಕಾಯುವಂತಹ ಯೋಜನೆಗಳಾಗಿವೆ ಎಂದು ಟಾಟಾ ಡೊಕೋಮೊ ಮುಖ್ಯಸ್ಥರು ಹೇಳುತ್ತಾರೆ.