ಗ್ರಾಹಕರ ಸುರಕ್ಷತೆಗಾಗಿ ಹೊಸ ಆ್ಯಪ್ ಬಿಡುಗಡೆಗೆ ನಿರ್ಧರಿಸಿರುವ ಕೇಂದ್ರ ಸರ್ಕಾರ
ಸೋಮವಾರ, 1 ಜುಲೈ 2019 (09:15 IST)
ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರ ದತ್ತಾಂಶ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ವಾಟ್ಸಪ್ ಆ್ಯಪ್ ರೀತಿಯದೇ ಹೊಸ ಆ್ಯಪ್ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ.
ಈಗಾಗಲೇ ಈ ಹೊಸ ಆ್ಯಪ್ ತಯಾರಿಯ ಕುರಿತು ಸರ್ಕಾರ ಕಾರ್ಯಪ್ರವೃತ್ತರಾಗಿದ್ದು, ಸರಕಾರಿ ಮಟ್ಟದ ಎಲ್ಲ ಸಂವಹನ, ಕೆಲಸ ಕಾರ್ಯಗಳಿಗೆ ಅನುಕೂವಾಗುವಂತೆ ಈ ಆ್ಯಪ್ ನ್ನು ರೂಪಿಸಿ, ಅದನ್ನು ಎಲ್ಲ ಇಲಾಖೆಗಳಲ್ಲಿ ಬಳಸುವಂತೆ ಯೋಜನೆ ರೂಪಿಸಲಾಗುತ್ತಿದೆ.
ಈ ಮೂಲಕ ಗ್ರಾಹಕರ ಸುರಕ್ಷತೆ ಮತ್ತು ಮಾಹಿತಿ ಗೌಪ್ಯತೆಗಾಗಿ ಪ್ರತ್ಯೇಕ ಆ್ಯಪ್ ರೂಪಿಸಿ, ದೇಶದಲ್ಲಿ ಗರಿಷ್ಠ ಭದ್ರತೆಯ ಸರ್ವರ್ ಅಳವಡಿಸಿ, ಅದರಲ್ಲಿ ದತ್ತಾಂಶ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.