ಎಟಿಎಂಗೆ ಹಣ ಭರ್ತಿ ಮಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಕೇಂದ್ರ ಗೃಹ ಸಚಿವಾಲಯ

ಸೋಮವಾರ, 20 ಆಗಸ್ಟ್ 2018 (14:05 IST)
ನವದೆಹಲಿ : ಎಟಿಎಂಗೆ ಹಣ ಭರ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಅಧಿಸೂಚನೆವೊಂದನ್ನು  ಹೊರಡಿಸಿದೆ.


ಅದರ ಪ್ರಕಾರ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ನಂತರ ಎಟಿಎಂಗೆ ಹಣ ಭರ್ತಿ ಮಾಡುವಂತಿಲ್ಲ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 4 ಗಂಟೆಯೊಳಗೆ ಎಟಿಎಂಗೆ ಹಣ ತುಂಬಬೇಕು. ಎಟಿಎಂ ಹಣ ನಿರ್ವಹಣೆ ಮಾಡುವ ಖಾಸಗಿ ಕಂಪನಿಗಳು ಮಧ್ಯಾಹ್ನದೊಳಗಾಗಿ ಬ್ಯಾಂಕ್ ನಿಂದ ಹಣ ಸಂಗ್ರಹಿಸಬೇಕು ಎಂದು ಸೂಚಿಸಿದೆ.


ಅಲ್ಲದೇ ಎಟಿಎಂ ಗೆ ಹಣ ತುಂಬುವ ವಾಹನದಲ್ಲಿ ಡ್ರೈವರ್ ಜೊತೆಗೆ ಇಬ್ಬರು ಪರಿಣಿತಿ ಹೊಂದಿರುವ ಬಂದೂಕುದಾರಿ ಭದ್ರತ ಸಿಬ್ಬಂದಿ ಹಾಗೂ ಇಬ್ಬರು ಎಟಿಎಂ ಗೆ ಹಣ ತುಂಬುವ ಅಧಿಕಾರಿಗಳನ್ನು ಕಳುಹಿಸಿಕೊಡುವಂತೆ ಹೇಳಿದೆ. ಇದಲ್ಲದೇ ಹಣ ಸಾಗಾಣೆ ಮಾಡುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅನ್ನು ಅಳವಡಿಕೆ ಮಾಡುವುದು ಕಡ್ಡವಾಗಿದ್ದು, ಐದುಕೋಟಿ ಗಿಂತ ಹೆಚ್ಚು ಮೊತ್ತದ ಹಣವನ್ನು ವಾಹನದಲ್ಲಿ ಸಾಗಾಣೆ ಮಾಡುವಂತಿಲ್ಲ ಎಂದು ತಿಳಿಸಿದೆ.


ಈ ಹೊಸ ಅಧಿಸೂಚನೆ ಫೆಬ್ರವರಿ 8, 2019ರಿಂದ ಜಾರಿಗೆ ಬರಲಿದ್ದು, ಕಟ್ಟು ನಿಟ್ಟಿನಲ್ಲಿ ಆದೇಶವನ್ನು ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವಾಲಯ ದೇಶದ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರಿಗೆ ಹಾಗೂ ಹಣ ಸಾಗಾಣೆ ಮಾಡುವ ಸೆಕ್ಯೂರಿಟಿ ಕಚೇರಿಗಳಿಗೆ ಆದೇಶಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ