ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಅಂಚೆ ಇಲಾಖೆ

ಗುರುವಾರ, 17 ಅಕ್ಟೋಬರ್ 2019 (09:26 IST)
ನವದೆಹಲಿ : ಗ್ರಾಹಕರಿಗೆ ಅಂಚೆ ಕಚೇರಿಯ ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ  ಅಂಚೆ ಇಲಾಖೆ ಹೊಸ ಮೊಬೈಲ್ ಆ್ಯಪ್ ನ್ನು ಬಿಡುಗಡೆ ಮಾಡಿದೆ.



 



ಅಂಚೆ ಇಲಾಖೆ ‘ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್’ ಆ್ಯಪ್ ನ್ನು ಬಿಡುಗಡೆ ಮಾಡಿದ್ದು,  ಇದರಿಂದ ಗ್ರಾಹಕರು ಅಂಚೆ ಕಚೇರಿಗೆ ಅಲೆದಾಡದೇ ಕುಳಿತಲ್ಲಿಯೇ ಆನ್ ಲೈನಲ್ಲಿಯೇ ವಹಿವಾಟನ್ನು ನಡೆಸಬಹುದು. ಇದರಿಂದ  ಗ್ರಾಹಕರು ಪಿಪಿಎಫ್ ಖಾತೆಗಳಿಗೆ ಮತ್ತು ಇತರ ಅಂಚೆ ಕಚೇರಿ ಯೋಜನೆಗಳಿಗೆ ಠೇವಣಿ ಇಡುವುದು ಸೇರಿದಂತೆ ಅನೇಕ ವಹಿವಾಟನ್ನು ನಡೆಸಬಹುದು.


ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಈ ಆ್ಯಪ್ ನ ಮೂಲಕ ವಹಿವಾಟು ನಡೆಸಲು ಗ್ರಾಹಕರು ಸಿಬಿಎಸ್ ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಹೊಂದಿರಬೇಕು. ಈ ಯೋಜನೆಯ ಬಗ್ಗೆ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ