ಪ್ರಯಾಣಿಕರ ವಾಹನ ವಿಭಾಗದಲ್ಲಿ ಮತ್ತೆ ಹಿಡಿತ ಸಾಧಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ. ಇದರ ಭಾಗವಾಗಿ ಕಾಂಪಾಕ್ಟ್ ಸೆಡಾನ್ (ಡಿಸ್ಕ್ ಉಳ್ಳ, ಉದ್ದ ಕಡಿಮೆ ಇರುವ) ಕಾರು ಟೈಗೋರ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಆಟೋ ಎಕ್ಸ್‌ಪೋ 2016ರಲ್ಲಿ ಕೈಟ್ 5 ಹೆಸರಿನೊಂದಿಗೆ ಪ್ರದರ್ಶಿಸಿದ ಕಾರಿಗೆ ಟೈಗೋರ್ ಎಂದು ಹೆಸರಿಟ್ಟಿದೆ ಟಾಟಾ ಕಂಪೆನಿ. ಈ ಕಾರನ್ನು ವಾಣಿಜ್ಯ ಪರವಾಗಿ ಯಾವಾಗ ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಶೀಘ್ರದಲ್ಲೇ ತಿಳಿಸುವುದಾಗಿ ಟಾಟಾ ಮೋಟಾರ್ಸ್ ಅಧ್ಯಕ್ಷ (ಪ್ರಯಾಣಿಕರ ವಾಹನ ವಿಭಾಗ) ಮಾಯಾಂಕ್ ಪರೀಖ್ ತಿಳಿಸಿದ್ದಾರೆ.
ಈ ಕಾರಿನ ಬೆಲೆ ರೂ.5.35-9.55 ಲಕ್ಷಗಳ ನಡುವೆ ಇರಲಿದೆ. ಮಾರುತಿ ಸುಜುಕಿ ಡಿಸೈರ್, ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್, ಫೋಕ್ಸ್‌ವ್ಯಾಗನ್ ಅಮಿಯೋ ಕಾರುಗಳಿಗೆ ಇದು ಪ್ರತಿಸ್ಪರ್ಧಿಯಾಗಲಿದೆ ಎಂದು ಭಾವಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.