ಆಪಲ್ ಐಫೋನ್ ಸೃಷ್ಟಿಯ ಹಿಂದಿದೆ ಡಿವೋರ್ಸ್, ಮನಸ್ತಾಪದಂತಹ ರೋಚಕ ಇತಿಹಾಸ
ಗುರುವಾರ, 15 ಜೂನ್ 2017 (09:13 IST)
ಆಪಲ್ ಐಫೋನ್ ಎಂದರೆ ಎಂಥಾ ಕ್ರೇಜ್ ಇದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಐಫೋನ್ ಕೊಳ್ಳೋಕೆ ಜನ ಏನೆಲ್ಲ ಸರ್ಕಸ್ ಮಾಡ್ತಾರೆ ಎಂಬುದನ್ನ ಸುದ್ದಿಗಳಲ್ಲಿ ಕೇಳುರುತ್ತೀರಿ. ಮೊಬೈಲ್ ಕ್ಷೇತ್ರದಲ್ಲೇ ಅತ್ಯಂತ ಎಕ್ಸ`ಲೆಂಟ್ ಫೀಚರ್`ಗಳನ್ನ ಒಳಗೊಂಡಿರುವ ಫೋನ್ ಎನ್ನಲಾಗುತ್ತಿರುವ ಆಪಲ್ ಐಫೋನ್ ಉತ್ಪಾದನೆ ಪ್ರಾರಂಭದ ಹಿಂದೆ ದೊಡ್ಡ ಕಥೆಯೇ ಇದೆ.
ಬರಿಯಾನ್ ಮರ್ಚೆಂಟ್ ಎಂಬ ಲೇಖಕ ಐಫೋನ್ ತಯಾರಿಕೆಯ ಹಿಂದಿನ ರೋಚಕ ಘಟನೆಗಳನ್ನ ಉಲ್ಲೇಖಿಸಿ `ದಿ ಒನ್ ಡಿವೈಸ್ ದಿ ಸೀಕ್ರೇಟ್ ಹಿಸ್ಟರಿ’ ಎಂಬ ಪುಸ್ತಕ ರಚಿಸಿದ್ದಾರೆ. ಜೂನ್ 20ರಂದು ಪುಸ್ತಕ ರಿಲೀಸ್ ಆಗುತ್ತಿದ್ದು, ಪುಸ್ತಕದ ಕೆಲ ಕುತೂಹಲಕಾರಿ ಅಂಶಗಳನ್ನ ಲೇಖಕರು ಆನ್`ಲೈನ್`ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಪಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಫಿಲ್ ಸ್ಖಿಲ್ಲರ್`ಗೆ ಸಂಪೂರ್ಣ ಟಚ್ ಸ್ಕ್ರೀನ್ ಐಫೋನ್ ರಿಲೀಸ್ ಮಾಡುವುದು ಇಷ್ಟವಿರಲಿಲ್ಲವಂತೆ. ಕೀಪ್ಯಾಡ್ ಸಹ ಇರಲೆಂದು ಅವರು ಬಯಸಿದ್ದರಂತೆ.
ಅತ್ಯುತ್ತಮ ಇಂಜಿನಿಯರ್`ಗಳನ್ನೊಳಗೊಂಡಿದ್ದ ಸಂಸ್ಥೆ ಎರಡೂವರೆ ವರ್ಷ ಈ ಸೀಕ್ರೇಟ್ ಪ್ರಾಜೆಸ್ಟ್`ಗಾಗಿ ತೊಡಗಿಸಿಕೊಂಡಿದ್ದರಂತೆ. ಮನೆ ಮಠ ಬಿಟ್ಟು ದುಡಿದಿದ್ದರಂತೆ. ಹೀಗಾಗಿ, ಪ್ರಾಜೆಕ್ಟ್`ನಿಂದಲೇ ಹಲವರು ವಿಚ್ಛೇದನಾ ಪಡೆದಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಗೆ ಇದೊಂದು ದೊಡ್ಡ ಸವಾಲಿನ ಕೆಲಸವಾಗಿತ್ತಂತೆ. 2004ರಲ್ಲಿ ಸ್ಟೀವ್ ಜಾಬ್ಸ್ ಈ ಪ್ರಾಜೆಕ್ಟ್`ಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ.