ಸೆಲರಿ ಸಸ್ಯಹಾರ ಬಳಕೆಯಿಂದ ಉತ್ತಮ ಆರೋಗ್ಯ

ಶನಿವಾರ, 7 ಮೇ 2016 (12:34 IST)
ಸೆಲರಿ ಎಪಿಯಾಸಿ ಕುಟುಂಬಕ್ಕೆ ಸೇರಿದ್ದು, ಇದನ್ನು ಸಸ್ಯಹಾರವಾಗಿ ಸೇವಿಸಲಾಗುತ್ತದೆ. ಸೆಲರಿ ಸಸ್ಯಹಾರದಲ್ಲಿರುವ ಅನೇಕ ಆರೋಗ್ಯ ಪ್ರಯೋಜನ ಮತ್ತು ಪೋಷಕಾಂಶಗಳ ಕುರಿತು ಸಾಕಷ್ಟು ಜನರಿಗೆ ತಿಳುವಳಿಕೆ ಇಲ್ಲ.
ಸೆಲರಿ ಸಸ್ಯಹಾರದ ಆರೋಗ್ಯ ಪ್ರಯೋಜನಗಳು
 
ಉತ್ತಮ ಕಣ್ಣಿನ ಆರೈಕೆ
ಸೆಲರಿ ಸಸ್ಯಹಾರ ಸಾಕಷ್ಟು ಪ್ರಮಾಣದ ವಿಟಮಿನ್ ಅಂಶ ಹೊಂದಿರುವುದರಿಂದ ಕಣ್ಣಿನ ಆರೈಕೆಗೆ ಉತ್ತಮ ಆಹಾರವಾಗಿದೆ.
 
ರಕ್ತದೊತ್ತಡವನ್ನು ಕಡಿಮೆಗೊಳಿಸುವುದು
ಸೆಲರಿ ಸಸ್ಯಹಾರ ನೈಸರ್ಗಿಕ ಸಾವಯವ ಸೋಡಿಯಂ ಪದಾರ್ಥವನ್ನು ಹೊಂದಿರುವುದರಿಂದ ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
 
ತೂಕ ಕಡಿಮೆ
ಕಡಿಮೆ ಕ್ಯಾಲೋರಿ ಹೊಂದಿರುವ ಸೆಲರಿ ಸಸ್ಯಹಾರ, ನಿಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಿ ತೂಕ ಕಡೆಮೆ ಮಾಡಲು ಸಹಾಯ ಮಾಡುತ್ತದೆ.
 
ಜೀರ್ಣಕ್ರಿಯೆಗೆ ಉತ್ತಮ
ದೈನಂದಿನ ಬಳಕೆಯಲ್ಲಿ ಸೆಲರಿ ಸಸ್ಯದ ಜ್ಯೂಸ್ ಸೇವಿಸುವುದರಿಂದ ದೇಹದ ಬ್ಲಡ್ ಪಿಎಚ್ ಸಮತೋಲನ, ಆಸಿಡಿಟಿಯನ್ನು ನ್ಯುಟ್ರಾಲೈಜಿಂಗ್, ಮಲಬದ್ಧತೆ ಮತ್ತು ಮೃದುವಾದ ಕರುಳಿನ ಚಲನೆ ನೆರವಾಗುತ್ತದೆ.
 
ಒತ್ತಡ ಕಡಿಮೆ
ಒತ್ತಡ ಹಾರ್ಮೋನುಗಳನ್ನು ಕಡಿಮೆಗೊಳಿಸಿ, ದೇಹದ ಒತ್ತಡ ನಿಯಂತ್ರಣ ಮಾಡಲು ಸೆಲರಿ ಸಸ್ಯಹಾರ ಉತ್ತಮ ಆಹಾರವಾಗಿದೆ.

ವೆಬ್ದುನಿಯಾವನ್ನು ಓದಿ