ಅತ್ಯಂತ ತೆಳುವಾದ ಚಾರ್ಚಿಂಗ್ ಪ್ಯಾಡ್ ಇದು

ಗುರುವಾರ, 5 ಜನವರಿ 2017 (10:23 IST)
ಅತ್ಯಾಧುನಿಕ ವೈರ್‌ಲೆಸ್ ಚಾರ್ಚಿಂಗ್ ಪ್ಯಾಡನ್ನು ಫ್ರಾನ್ಸ್ ಮೂಲದ ಅಂಕುರ ಸಂಸ್ಥೆ ಅಭಿವೃದ್ಧಿಪಡಿಸಿದೆ. ಅತ್ಯಂತ ತೆಳುವಾಗಿ ಇರುವ ಇದರಿಂದ ಒಂದೇ ಸಲ ಮೂರಕ್ಕೂ ಹೆಚ್ಚು ಗ್ಯಾಜೆಟ್‍ಗಳನ್ನು ಚಾರ್ಚ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.
 
ಎನರ್ಜಿ ಸ್ಕ್ವೇರ್ ಎಂದು ಕರೆಯಲಾಗುತ್ತಿರುವ ಈ ಸಾಧನದಲ್ಲಿ ಚಾರ್ಚಿಂಗ್ ಪ್ಯಾಡ್, ಸ್ಟಿಕ್ಕರ್ ಇದೆ. ಸ್ಟಿಕ್ಕರ್ ಮೇಲೆ ಸಂಶೋಧಕರು ಅತಿ ಸೂಕ್ಷ್ಮ ಎಲಕ್ಟ್ರೋಡ್, ಕನೆಕ್ಟರ್‌ಗಳನ್ನು ಅಳವಡಿಸಿದ್ದಾರೆ. ನಮ್ಮ ಬಳಿಯ ಗ್ಯಾಜೆಟ್‌ಗಳಿಗೆ ಈ ಕನೆಕ್ಟರ್‌ಗಳನ್ನು ಜೋಡಿಸಬೇಕು.
 
ಆ ಬಳಿಕ ಗ್ಯಾಜೆಟನ್ನು ಪ್ಯಾಡ್ ಮೇಲೆ ಇಡಬೇಕು. ಅಷ್ಟೇ ಚಾರ್ಚ್ ಆಗಲು ಆರಂಭವಾಗುತ್ತದೆ. ಇತರೆ ವೈರ್‌ಲೆಸ್ ಚಾರ್ಚಿಂಗ್‌ಗಳಿಗೆ ಹೋಲಿಸಿದರೆ ಎನರ್ಜಿ ಸ್ವೇರ್ ತುಂಬಾ ವಿಭಿನ್ನವಾದದ್ದು. ಉಳಿದೆಲ್ಲಾ ವಿದ್ಯುದಯಸ್ಕಾಂತ ಪ್ರೇರಣೆಯಿಂದ ಕೆಲಸ ಮಾಡಿದರೆ ಇದು ಕೇವಲ ವಿದ್ಯುತ್ ಪ್ರೇರಣೆ ಮೇಲೆ ಆಧಾರಪಟ್ಟಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ