ಮೊಬೈಲ್ ಗ್ರಾಹಕರಿಗೆ ಬಂಪರ್ ಆಫರ್: ಕೇವಲ 250 ರೂ.ಗಳಿಗೆ 10 ಜಿಬಿ, 4ಜಿ ಡೇಟಾ ಸೇವೆ

ಸೋಮವಾರ, 29 ಆಗಸ್ಟ್ 2016 (13:38 IST)
ಭಾರತೀಯ ಟೆಲಿಕಾಂ ಸಂಸ್ಥೆಗಳಲ್ಲಿ 4ಜಿ ಸೇವೆಯಲ್ಲಿ ಗರಿಷ್ಠ ಚಂದಾದಾರರನ್ನು ಸಂಗ್ರಹಿಸಲು ಬಾರಿ ಪೈಪೋಟಿ ಶುರುವಾಗಿದ್ದು, ಹೊಸ ಚಂದಾದಾರರನ್ನು ತನ್ನೆಡೆಗೆ ಆಕರ್ಷಿಸುವ ದೃಷ್ಟಿಯಿಂದ ಏರ್‌ಟೆಲ್ ಹೊಸ ಯೋಜನೆಯೊಂದನ್ನು ಘೋಷಿಸಿದೆ.
 
ನೀವು ಸ್ಯಾಮ್‌ಸುಂಗ್ ಜೆ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಬಯಸಿದ್ದೆ ಆದರೆ, 1 ಜಿಬಿ ಡೇಟಾ ವೆಚ್ಚದಲ್ಲಿ 10 ಜಿಬಿ 4ಜಿ ಡೇಟಾ ಸೇವೆಯನ್ನು ಆನಂದಿಸಬಹುದಾಗಿದೆ. ಈ ಸೇವೆ ಅಸ್ತಿತ್ವದಲ್ಲಿರುವ ಹಾಗೂ ಹೊಸ ಏರ್‌ಟೆಲ್ ಗ್ರಾಹಕರಿಗೆ ಅನ್ವಯವಾಗಲಿದೆ. 
 
ಭಾರತೀಯ ಏರ್‌ಟೆಲ್ ಸಂಸ್ಥೆ ನೀಡುತ್ತಿರುವ ಈ ಹೊಸ ಯೋಜನೆಯಲ್ಲಿ ಗ್ರಾಹಕರು ಕೇವಲ 250 ರೂಪಾಯಿಗಳಲ್ಲಿ 10 ಜಿಬಿ ಡೇಟಾ ಸೇವೆಯನ್ನು ಪಡೆಯಬಹುದಾಗಿದೆ.
 
ಈ ಹೊಸ ಯೋಜನೆಯ ಪ್ರಸ್ತಾಪವನ್ನು ಪಡೆಯಲು ಏರ್‌ಟೆಲ್ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿರುವ ಕ್ರಮಗಳನ್ನು ಅನುಸರಿಸಿ. ಅಥವಾ ಏರ್‌ಟೆಲ್ ಮಳಿಗೆಯಲ್ಲಿಯೂ ಸಹ ಮಾಹಿತಿ ಪಡೆಯಬಹುದಾಗಿದೆ. ಯಾವ ಪ್ರದೇಶದಲ್ಲಿ 4ಜಿ ಸೇವೆಯ ಕೊರತೆ ಇರುತ್ತದೆಯೂ, ಅಂತಹ ಪ್ರದೇಶದ ಗ್ರಾಹಕರಿಗೆ 3ಜಿ ಡೇಟಾವನ್ನು ನೀಡಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ