ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗುವ ಸೂಚನೆ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ಮಂಗಳವಾರ, 11 ಸೆಪ್ಟಂಬರ್ 2018 (08:46 IST)
ರಾಯ್ ಪುರ : ಸೋಮವಾರ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಮಿತ್ರ ಪಕ್ಷಗಳು ಭಾರತ್ ಬಂದ್ ಗೆ ಕರೆ ಕೊಟ್ಟಿದ್ದರು. ಈ ಬಂದ್ ಯಶಸ್ವಿಯಾಗಿದ್ದು, ಈ ನಡುವೆ ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.


ಸೋಮವಾರ ಛತ್ತೀಸ್ ಗಡದ ದುರ್ಗ್ ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,’ ದೇಶಾದ್ಯಂತ ಐದು ಇಥೆನಾಲ್ ತಯಾರಿಕೆ ಘಟಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಇದನ್ನು ಪೆಟ್ರೋಲ್, ಡಿಸೇಲ್ ಗೆ ಮಿಶ್ರಣ ಮಾಡಿದರೆ ಅವುಗಳ ಬೆಲೆ ಕಡಿಮೆಯಾಗಿಲಿದೆ. ಇಂಧನಕ್ಕೆ ಇಥೆನಾಲ್ ಮಿಶ್ರಣ ಮಾಡಿದರೆ ಡಿಸೇಲ್ ಬೆಲೆಯನ್ನು ಪ್ರತಿ ಲೀ.ಗೆ 50ರೂ ಹಾಗೂ ಪೆಟ್ರೋಲ್ ಬೆಲೆಗೆ ಲೀ 55ರೂಗೆ ಬೆಲೆಯನ್ನು ತರಬಹುದಾಗಿದೆ ಎಂದು ತಿಳಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ