ಹರಿಯಾಣಾದಲ್ಲಿ 4ಜಿ ಸೇವೆ ಆರಂಭಿಸಿದ ವೋಡಾಫೋನ್

ಸೋಮವಾರ, 29 ಆಗಸ್ಟ್ 2016 (14:45 IST)
ದೇಶದ ಮೊಬೈಲ್ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ವೋಡಾಪೋನ್ ಇಂಡಿಯಾ ಟೆಲಿಕಾಂ ಸಂಸ್ಥೆ, ಹರಿಯಾಣದಲ್ಲಿ ಸೂಪರ್‌ನೆಟ್ ಟಿಎಂ 4ಜಿ ಸೇವೆಯನ್ನು ಅನಾವರಣಗೊಳಿಸುವುದಾಗಿ ಘೋಷಿಸಿದೆ.
 
ಮುಂದಿನ ಕೆಲವೇ ತಿಂಗಳಲ್ಲಿ ಹರಿಯಾಣದಲ್ಲಿ 4ಜಿ ಸೇವೆ ಆರಂಭಿಸಲಿರುವ ವೋಡಾಫೋನ್, ನಂತರ ಕೇರಳ, ಕರ್ನಾಟಕ, ಕೋಲ್ಕತಾ, ದೆಹಲಿ, ಎನ್‌ಸಿಆರ್ ಮತ್ತು ಮುಂಬೈಗಳಲ್ಲಿ 4ಜಿ ಸೇವೆ ಆರಂಭಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.   
 
ಹರಿಯಾಣದಲ್ಲಿ ವೋಡಾಪೋನ್ 4 ಜಿ ಸೇವೆಯನ್ನು ಅನಾವರಣಗೊಳಿಸುವ ಮೂಲಕ ಗ್ರಾಹಕರಿಗೆ ಉಚಿತವಾಗಿ ಎರಡು ಬಾರಿ 1 ಜಿಬಿ ಟೇಡಾ ಸೇವೆ ಹಾಗೂ ವೋಡಾಪೋನ್ ಟೂ ವೋಡಾಪೋನ್ (ಸೀಮಿತ ಅವಧಿಗೆ) ಅನಿಯಮಿತ ಉಚಿತ ಕರೆಗಳನ್ನು ಒದಗಿಸಲಿದೆ.
 
ಮೂರು ತಿಂಗಳ ಕಾಲ ಉಚಿತ ಟಿವಿ ಸೇವೆ, ವೊಡಾಫೋನ್ 4ಜಿ ಚಂದಾದಾರಿಕೆಯ ಭಾಗವಾಗಿ ವೊಡಾಫೋನ್ ಪ್ಲೇನಲ್ಲಿ ಚಲನಚಿತ್ರಗಳು ಮತ್ತು ವೀಡಿಯೊಗಳನ್ನು ನೀಡಲಿದೆ.
 
ಮನರಂಜನಾ ಕೇಂದ್ರವಾಗಿ 100+ ಲೈವ್ ಟಿವಿ ಚಾನೆಲ್ಸ್, 18000 ಸಿನೆಮಾ ಹಾಗೂ ಟಿವಿ ಶೋ ಟೈಟಲ್ಸ್ ಸೇರಿದಂತೆ ಅನೇಕ ಪ್ಲ್ಯಾನ್‌ಗಳನ್ನು ವೋಡಾಫೋನ್ ಗ್ರಾಹಕರಿಗಾಗಿ ಘೋಷಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ