ಗೋವಾದಲ್ಲಿ ವೊಡಾಫೋನ್ 4ಜಿ ಸೇವೆ ಆರಂಭ

ಸೋಮವಾರ, 13 ಫೆಬ್ರವರಿ 2017 (16:39 IST)
ಗೋವಾದಲ್ಲಿ ವೊಡಾಫೋನ್ 4ಜಿ ಸೇವೆಗಳನ್ನು ಆರಂಭಿಸುತ್ತಿರುವುದಾಗಿ ಹೇಳಿದೆ. ಗೋವಾದಲ್ಲಿ ವೊಡಾಫೋನ್‌ಗೆ ಸುಮಾರು ಶೇ.50ರಷ್ಟು ಮಾರುಕಟ್ಟೆ ಪಾಲಿದೆ. ಇಲ್ಲಿ ಒಟ್ಟಾರೆ 8.5 ಲಕ್ಷ  ಸಂಪರ್ಕಗಳಿವೆ. ಈ ರಾಜ್ಯದಲ್ಲಿ ಶೇ.97ರಷ್ಟು ಜನ ವೊಡಾಪೋನ್ ಸಂಪರ್ಕ ಹೊಂದಿದ್ದಾರೆಂದು ಕಂಪೆನಿಯ ಮಹಾರಾಷ್ಟ್ರ, ಗೋವಾ ವೃತ್ತದ ಬಿಜಿನೆಸ್ ಹೆಡ್ ಆಶಿಷ್ ಚಂದ್ರ ತಿಳಿಸಿದ್ದಾರೆ.
 
ಈ ಕಂಪೆನಿಗೆ ಇರುವ ಶೇ.50ರಷ್ಟು ಗ್ರಾಹಕರಲ್ಲಿ ಸುಮಾರು ಶೇ.44ರಷ್ಟು ಮೊಬೈಲ್ ಫೊನ್‌ಗಳಲ್ಲಿ ಇಂಟರ್‌ನೆಟ್ ಬಳಸುತ್ತಿದ್ದಾರೆ. ಇಲ್ಲಿ ವೊಡಾಫೋನ್ ನೆಟ್‌ವರ್ಕ್‍ನಲ್ಲಿ ಅಂತರ್ಜಾಲ ಬಳಕೆ ವರ್ಷಕ್ಕೆ ಶೇ.38ರಷ್ಟು ಬೆಳೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
 
ಈಗ ಕೇರಳ, ಕೋಲ್ಕತ್ತಾ, ಕರ್ನಾಟಕ, ದೆಹಲಿ, ಮುಂಬೈ, ಹರಿಯಾಣ, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಅಂಡಮಾನ್ ನಿಕೋಬಾರ್ ದ್ವೀಪಗಳು, ಪಂಜಾಬ್ ಪ್ರದೇಶದಲ್ಲಿ ಸೇವೆಗಳನ್ನು ನೀಡಲಾಗುತ್ತಿದೆ. ಶೀಘ್ರದಲ್ಲೇ ಚೆನ್ನೈ ನಿವಾಸಿಗಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮಾರ್ಚ್ 2017ಕ್ಕೆ 2,400 ಪಟ್ಟಣಗಳಲ್ಲಿ ವಿಸ್ತರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ