ವೋಕ್ಸವಾಗನ್‌ನಿಂದ ಟಿಗ್ವಾನ್ ಸುವಿ ಮಾಡೆಲ್ ಕಾರು 2017ರಲ್ಲಿ ಭಾರತಕ್ಕೆ

ಶನಿವಾರ, 2 ಜುಲೈ 2016 (15:31 IST)
ವೋಕ್ಸ್‌ವ್ಯಾಗನ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಪೀಳಿಗೆಯ ಟಿಗೌನ್ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೀಗ, ಟಿಗೌನ್  ಸುವಿ ಆವೃತ್ತಿಯ ಕಾರುಗಳು ಮತ್ತು ಕ್ರಾಸ್ ಕೂಪೆ ಜಿಟಿಇ ಆವೃತ್ತಿಯ ಕಾರುಗಳ ನಡುವೆ ಹೋಲಿಕೆ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. 
 
ಭಾರತದ ಮಾರುಕಟ್ಟೆಗೆ 2016 ರ ಸಾಲಿನಲ್ಲಿ ಟಿಗೌನ್ ಸುವಿ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡುವ ಆಶಯ ಹೊಂದಿದ್ದು, ಆದರೆ, ಡೀಸೆಲ್ ಆವೃತ್ತಿಯ ಅಮೆಯೊ, ಪೋಲೊ ಜಿಟಿಐ ಮತ್ತು ಹೊಸ ಪೀಳಿಗೆಯ ಪಾಸ್ಸಟ್ ಕಾರುಗಳ ಪೈಪೋಟಿಯಿಂದಾಗಿ 2017 ರ ಸಾಲಿನಲ್ಲಿ ಟಿಗೌನ್ ಸುವಿ ಆವೃತ್ತಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
 
ಎಮ್‌ಕ್ಯೂಬಿ ಪ್ಲ್ಯಾಟ್‌ಫಾರ್ಮ್ ಆಧಾರಿತ, ಹೊಸ ಟಿಗೌನ್ ಆವೃತ್ತಿಯ ಕಾರುಗಳು 60 ಎಂಎಂ ಉದ್ದ ಮತ್ತು 30 ಎಂಎಂ ಅಗಲವಾದ ವಿಸ್ತಾರವನ್ನು ಹೊಂದಿದೆ. ಆಂತರಿಕ ಸ್ಥಳಾವಕಾಶವನ್ನು ಹೆಚ್ಚಿಸಲು ಚಕ್ರ ಆಧಾರಿತವನ್ನು 77 ಎಂಎಂನಿಂದ 2681 ಎಂಎಂವರೆಗೂ ಹೆಚ್ಚಿಸಲಾಗಿದೆ. 
 
ವೋಕ್ಸ್‌ವ್ಯಾಗನ್ ಸಂಸ್ಥೆಯಿಂದ ಭಾರತದ ಮಾರುಕಟ್ಟೆಗೆ ಕಾರುಗಳು ಬಿಡುಗಡೆ ಮಾಡುತ್ತಿರುವುದು ಇದೆ ಮೊದಲ ಬಾರಿಯಲ್ಲ. ಭಾರತಕ್ಕೆ ಬಿಡುಗಡೆಯಾಗಿರುವ ಮೊದಲ ಕಾರುಗಳ ಗೌರವ ಹೊಸ ಪಾಸ್ಸೆಟ್ ಆವೃತ್ತಿಯ ಕಾರುಗಳಿಗೆ ದೊರೆಯಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ