ಆರ್‌ಬಿಐನಿಂದ ನಿರ್ಗಮಿಸಲು ಕೆಲವು ದಿನಗಳಿರುವ ಮುಂಚೆ, ಗವರ್ನರ್ ರಘುರಾಮ್ ರಾಜನ್ ತಾವು ಇನ್ನೂ ಸ್ವಲ್ಪ ಕಾಲ ಹುದ್ದೆಯಲ್ಲಿ ತಂಗಲು ಬಯಸಿದ್ದರೂ ತಮ್ಮ ಅಧಿಕಾರಾವಧಿ ವಿಸ್ತರಣೆ ಕುರಿತು ಸರ್ಕಾರದೊಂದಿಗೆ ಸೂಕ್ತ ರೀತಿಯ ಒಪ್ಪಂದಕ್ಕೆ ಬರಲಾಗಲಿಲ್ಲ ಎಂದಿದ್ದಾರೆ.
ಅಪೂರ್ಣ ಕೆಲಸದ ಕಾರಣದಿಂದ ಸೂಕ್ತ ರೀತಿಯ ಒಪ್ಪಂದವನ್ನು ಸರ್ಕಾರ ಮಾಡಿಕೊಂಡಿದ್ದರೆ ಹುದ್ದೆಯಲ್ಲಿ ಮುಂದುವರಿಯಲು ಬಯಸಿದ್ದೆ. ಆದರೆ ಅದು ನೆರವೇರದಿರುವುದರಿಂದ ಅಧಿಕಾರಾವಧಿ ಮುಗಿಯಿತು ಎಂದು ರಾಜನ್ ಹೇಳಿದರು. ವಿವಿಧ ವಿಷಯಗಳ ಬಗ್ಗೆ ರಾಜನ್ ಅವರ ಕೆಲವು ಬಿಚ್ಚುಮಾತಿನ ಅಭಿಪ್ರಾಯಗಳನ್ನು ಆರ್ಥಿಕ ಮತ್ತು ಆರ್ಥಿಕೇತರ ವಿಷಯಗಳಲ್ಲಿ ಸರ್ಕಾರದ ಅಭಿಪ್ರಾಯಗಳಿಗೆ ವಿರುದ್ಧವೆಂದು ಕಾಣಲಾಗಿತ್ತು.
ಅನೇಕ ಸಂದರ್ಭಗಳಲ್ಲಿ ಅಸೂಕ್ತ ಕಾಲದಲ್ಲಿ ಮಾತನಾಡಿದ್ದೇನೆಂಬ ಟೀಕೆಯನ್ನು ನಿರಾಕರಿಸಿದ ರಾಜನ್, ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳು ಒಳ್ಳೆಯ ಪೌರತ್ವವೇನೆಂದು ಯುವ ಮನಸ್ಸುಗಳಿಗೆ ಹೇಳುವುದು ಕಾನೂನುಬದ್ಧ ಕರ್ತವ್ಯ ಮತ್ತು ನೈತಿಕ ಹೊಣೆಗಾರಿಕೆ ಎಂದು ಪ್ರತಿಪಾದಿಸಿದರು.