ವಾಟ್ಸಾಪ್ ನ ಈ ಫೀಚರ್ ಬಗ್ಗೆ ನಿಮಗೆ ತಿಳಿದಿದೆಯಾ...?

ಶುಕ್ರವಾರ, 8 ನವೆಂಬರ್ 2019 (12:03 IST)
ನವದೆಹಲಿ: ಇನ್ಮುಂದೆ ವಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಗ್ರೂಫ್ ಮಾಡಿಕೊಂಡು ಅದಕ್ಕೆ ತಮ್ಮ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ಸೇರಿಸುವ ಹಾಗೇ ಇಲ್ಲ. ಈಗ ವ್ಯಾಟ್ಸಾಪ್ ಒಂದು ಹೊಸ ಪ್ರೈವೆಸಿ ಸೆಟ್ಟಿಂಗ್ ಫೀಚರ್ ಅನ್ನು ಅಪ್ ಲೋಡ್ ಮಾಡಿದೆ.ಮೊದಲು ಕಾಂಟ್ಯಾಕ್ಟ್ ನಲ್ಲಿರುವ ಸದಸ್ಯರ ಅನುಮತಿ ಪಡೆಯದೇ ಅವರನ್ನು  ವಾಟ್ಸಾಪ್ ಗ್ರೂಪ್ ಗೆ ಸೇರಿಸಬಹುದಿತ್ತು. ಆದರೆ ಈ ಹೊಸ ಫೀಚರ್ ನಲ್ಲಿ ಯಾರನ್ನಾದರೂ ಗ್ರೂಪ್ ಗೆ  ಸೇರಿಸುವ ಮೊದಲು ಖಾಸಗಿಯಾಗಿ ಅನುಮತಿ ಮೆಸೇಜ್ ಕಳುಹಿಸಬೇಕು. ಈ ಮೆಸೇಜ್ ಗೂ ಅವಧಿ ಇದೆ. ಆ ಅವಧಿಯೊಳಗೆ ಗ್ರೂಪ್ ಗೆ ಸೇರುವ ವ್ಯಕ್ತಿ ಅನುಮತಿ ನೀಡಿದರೆ ಮಾತ್ರ ಸೇರಿಸಿಕೊಳ್ಳಬಹುದು ಅವರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಮ್ಮ ವಾಟ್ಸಾಪ್ ಅಪ್ ಡೇಟ್ ಮಾಡಿಕೊಂಡರೆ ಈ ಫೀಚರ್  ದೊರಕಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ