ವಾವ್! ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಗ್ರಾಹಕರ ಸ್ವಾಗತಕ್ಕಾಗಿ ರೋಬೋಟ್ಗಳು
ಸೋಮವಾರ, 29 ಆಗಸ್ಟ್ 2016 (14:35 IST)
ಶೀಘ್ರದಲ್ಲಿಯೇ ಗ್ರಾಹಕರು ಎಚ್ಡಿಎಫ್ಸಿ ಬ್ರಾಂಚ್ಗಳಲ್ಲಿ ರೋಬೋಟ್ಗಳು ಸ್ವಾಗತಿಸುವುದನ್ನು ಕಾಣಬಹುದಾಗಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಜಪಾನಿನ ಬ್ಯಾಂಕ್ಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಭಾರತದ ಎರಡನೇಯ ಅತೀ ದೊಡ್ಡ ಖಾಸಗಿ ಒಡೆತನದ ಎಚ್ಡಿಎಫ್ಸಿ ಬ್ಯಾಂಕ್, ಬ್ಯಾಂಕ್ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಸ್ವಾಗತಕ್ಕಾಗಿ ರೋಬೋಟ್ಗಳನ್ನು ಬಳಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಟೋಕಿಯೋ-ಮಿತ್ಸುಬಿಷಿ ಬ್ಯಾಂಕ್ ನಾವೋ ಹೆಸರಿನ ರೋಬೋಟ್ನ್ನು ಕಚೇರಿಗಳಲ್ಲಿ ಅಳವಡಿಸಿತ್ತು. ಇದರಿಂದ ಪ್ರೇರಣೆ ಹೊಂದಿರುವ ಎಚ್ಡಿಎಫ್ಸಿ ಬ್ಯಾಂಕ್ ಈ ಹೊಸ ಯೋಜನೆಯನ್ನು ಅನಾವರಣಗೊಳಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ