ಶೀಘ್ರದಲ್ಲಿಯೇ ಕ್ಸಿಯೊಮಿ ಸ್ಮಾರ್ಟ್‌ಫೋನ್ ವಾಚ್ ಮಾರುಕಟ್ಟೆಗೆ

ಶನಿವಾರ, 30 ಏಪ್ರಿಲ್ 2016 (19:52 IST)
ಚೀನಾ ಮೂಲದ ದೈತ್ಯ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಕ್ಸಿಯೊಮಿ, ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಸ್ಮಾರ್ಟ್‌ವಾಚ್‌ವೊಂದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ಬೀಜಿಂಗ್‌ನಲ್ಲಿ ನಡೆದ ಮಾಧ್ಯಮ ಕೂಟದಲ್ಲಿ ಕ್ಸಿಯೊಮಿ ಸಂಸ್ಥೆಯ ಸಹಸಂಸ್ಥಾಪಕರಾದ ಲಿಯು ಡಿ ಈ ಸ್ಮಾರ್ಟ್‌ವಾಚ್‌ನ್ನು ಘೋಷಣೆ ಮಾಡಿದ್ದಾರೆ. ಆದರೆ, ಲಿಯು ಡಿ ಈ ಸ್ಮಾರ್ಟ್‌ವಾಚ್ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಕ್ಸಿಯೊಮಿ ಸ್ಮಾರ್ಟ್‌ಪೋನ್‌ಗಳು ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೇಲೆ ನಡೆಯುತ್ತಿದ್ದು, ಸ್ಮಾರ್ಟ್‌ವಾಚ್‌ಗಳು ಸಹ ಗೂಗಲ್ ಆಂಡ್ರಾಯ್ಡ್  ಪ್ಲಾಟ್‌ಫಾರ್ಮ್ ಮೇಲೆ ನಡೆಯಬಹುದೆಂದು ಅಂದಾಜಿಸಲಾಗಿದೆ.
 
ಈಗಾಗಲೇ ಕ್ಸಿಯೊಮಿ, ತನ್ನ ಮಿ ಬ್ಯಾಂಡ್‌ನೊಂದಿಗೆ ವೇರೆಬಲ್ ವಿಭಾಗದಲ್ಲಿ ಅಸ್ತಿತ್ವವನ್ನು ದೊಂದಿದೆ. ಮೇ 10 ರಂದು ಚೀನಾದಲ್ಲಿ ನಡೆಯುವ ಸಮಾರಂಭದಲ್ಲಿ ಬ್ಯಾಂಡ್ ಆವೃತ್ತಿಯನ್ನು ಅನಾವರಣಗೊಳಿಸಲು ಸಂಸ್ಥೆ ಸಿದ್ಧತೆ ನಡಿಸಿದೆ ಎಂದು ಚೀನಾದಲ್ಲಿ ಇತ್ತೀಚಿಗೆ ನಡೆದ ಕಾನ್ಫರೆನ್ಸ್ ಸಭೆಯಲ್ಲಿ ಸಂಸ್ಥೆಯ ಸಿಇಒ ಲೀ ಜೂನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ