ಭಾರತ ಮತ್ತು ಸೌದಿ ಅರೇಬೀಯಾ ದೇಶಗಳ ನಡುವೆ ವ್ಯಾಪಾರ ವೃದ್ಧಿಯಾಗುತ್ತಿದ್ದು, ಕಳೆದ ವರ್ಷ 9.87 ಬಿಲಿಯನ್ ಡಾಲರ್‌ಗಳಷ್ಟು ವ್ಯಾಪಾರ ವಹಿವಾಟು ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೌದಿ ಅರೆಬೀಯಾದಲ್ಲಿರುವ ಭಾರತದ ರಾಯಭಾರಿ ಡಾ. ಆಸೂಫ್ ಸಯ್ಯದ್ ಭಾರತ ಕಳೆದ ಮೂರು ವರ್ಷಗಳ ಹಿಂದೆ ಕೇವಲ 250ಮಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದ ಭಾರತ , ಕಳೆದ ವರ್ಷ 1.2 ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿ ಆರನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಭಾರತದ ಕಂಪೆನಿಗಳಾದ ವಿಪ್ರೋ, ಸತ್ಯಂ, ಟಿಸಿಐಎಲ್, ಟಿಸಿಎಸ್, ಟಾಟಾ ಮೋಟಾರ್ಸ್ ಮತ್ತು ಎಲ್ ಆಂಡ್ ಟಿ ಕಂಪೆನಿಗಳು ತಮ್ಮ ಯೋಜನೆಯನ್ನು ಸೌದಿಯಲ್ಲಿ ಆರಂಭಿಸಿದ್ದು, ಸೌದಿ ಅರೇಬಿಯಾದ ಕಂಪೆನಿಗಳು ಭಾರತದಲ್ಲಿ 49 ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು 50 ಯೋಜನೆಗಳಿಗೆ ಭಾರತ ಸರಕಾರ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಿದ್ದಾರೆ.