ಉಪ್ಪಿ 'ಬಸವಣ್ಣ' ಚಿತ್ರದಲ್ಲಿ ರಾಗಿಣಿ ಸೆಕೆಂಡ್ ಹೀರೋಯಿನ್?

ಶುಕ್ರವಾರ, 14 ಜೂನ್ 2013 (15:12 IST)
ನಿರ್ದೇಶಕ ಶ್ರೀನಿವಾಸ ರಾಜು ನೀನೇ ಹೀರೋಯಿನ್ ಎಂದು ಹೇಳಿ ಕಾಲ್‌ಶೀಟ್
PR
ಡೆದುಕೊಂಡು ಎರಡನೇ ನಾಯಕಿಯ ಪಾತ್ರವನ್ನು ನೀಡುತ್ತಿದ್ದಾರಾ? ಇಂತಹದ್ದೊಂದು ಸಂಶಯಕ್ಕೆ ಕಾರಣವಾಗಿರುವುದು 'ಬಸವಣ್ಣ' ಚಿತ್ರ. ಈ ಚಿತ್ರದಲ್ಲಿ ನಾನೇ ಹೀರೋಯಿನ್ ಎಂದು ರಾಗಿಣಿ ಹೇಳುತ್ತಿದ್ದರೆ, ರಾಗಿಣಿ ಎರಡನೇ ನಾಯಕಿ ಎಂದು ನಿರ್ದೇಶಕರು ಹೇಳುತ್ತಿದ್ದಾರೆ!

ಇದು ಸ್ಪಷ್ಟವಾದಲ್ಲಿ 'ಬಸವಣ್ಣ' ಚಿತ್ರ ಎರಡನೇ ವಿವಾದಕ್ಕೂ ಕಾರಣವಾಗಲಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ವಿವಾದದಿಂದ ಸಾಕಷ್ಟು ಸುದ್ದಿಯಾಗುತ್ತಿದೆ.

ರಾಗಿಣಿ ಎರಡನೇ ನಾಯಕಿಯಾಗಲು ಒಪ್ಪಿಕೊಂಡರೇ? ಒಂದು ವೇಳೆ ನಿರ್ದೇಶಕ ಶ್ರೀನಿವಾಸ ರಾಜು ಮೊದಲನೇ ನಾಯಕಿ ಎಂದು ಆಯ್ಕೆ ಮಾಡಿ, ಎರಡನೇ ನಾಯಕಿ ಪಾತ್ರ ಕೊಟ್ಟರೆ ನಟಿಸುವರೇ? ಸಾಧ್ಯತೆ ತುಂಬಾನೇ ಕಡಿಮೆ. ಯಾಕೆಂದರೆ ರಾಗಿಣಿ ಈಗಾಗಲೇ ಚಿತ್ರರಂಗದಲ್ಲಿ ನೆಲೆಯೂರಿರುವ ನಾಯಕಿ. ರಮ್ಯಾರಂತಹ ನಾಯಕಿಗೆ ಸೆಡ್ಡು ಹೊಡೆಯುವಷ್ಟು ಬೆಳೆದಿರುವ ನಾಯಕಿ. ಹೀಗಿರುವಾಗ ಸಣ್ಣಪುಟ್ಟ ಪಾತ್ರಗಳಿಗೆ ಜೋತು ಬೀಳುವ ಪ್ರಸಂಗವೇ ಬರದು.

ಈ ಬಗ್ಗೆ ಶ್ರೀನಿವಾಸ್ ರಾಜು ಮಾತ್ರ ತನ್ನದೇ ಕಥೆ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಾನು. ಚಿತ್ರದಲ್ಲಿ ನಾಯಕಿಯರ ಪಾತ್ರ ಎಷ್ಟು ಎನ್ನುವುದು ನನಗೆ ಗೊತ್ತು. ರಾಗಿಣಿ ಎರಡನೇ ನಾಯಕಿ ಪಾತ್ರ ಮಾಡಿದರೆ ಅದರಲ್ಲಿ ತಪ್ಪೇನಿದೆ? ಇದರಲ್ಲಿ ವಿವಾದಕ್ಕೆ ಕಾರಣವಾಗುವ ಯಾವುದೇ ಅಂಶವಿಲ್ಲ ಎಂದಿದ್ದಾರೆ.

'ಬಸವಣ್ಣ' ಚಿತ್ರದಲ್ಲಿ ಉಪ್ಪಿ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಿರ್ದೇಶಕ ಶ್ರೀನಿವಾಸ ರಾಜು ಮತ್ತು ಮನೋಹರ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ಭುತ ಕಥೆಯಿದೆ ಎಂದು ರಾಗಿಣಿ ಟ್ವೀಟ್ ಮಾಡಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರುವ ಅವರು, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದರೂ, ನಾನೇ ನಾಯಕಿ. ನನಗೆ ನಾಯಕನಷ್ಟೇ ನಟನೆಗೆ ಅವಕಾಶವಿದೆ. ಇನ್ನೊಬ್ಬ ನಾಯಕಿಯಿಂದ ನನಗೇನೂ ತೊಂದರೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಂದ ಹಾಗೆ, ಶ್ರೀನಿವಾಸ ರಾಜು ನಿರ್ದೇಶನದ ಇನ್ನೊಂದು ಚಿತ್ರಕ್ಕೂ ರಾಗಿಣಿ ಸಹಿ ಹಾಕಿದ್ದಾರಂತೆ. 'ಬಸವಣ್ಣ' ಮುಗಿದ ಬಳಿಕ ಅದು ಶುರು.

ವೆಬ್ದುನಿಯಾವನ್ನು ಓದಿ