‘ಗಜನಿ’ ಹೀರೋಯಿನ್ ಆಸಿನ್ ಬಾಳಲ್ಲಿ ಹೊಸ ಸುದ್ದಿ

ಗುರುವಾರ, 26 ಅಕ್ಟೋಬರ್ 2017 (08:27 IST)
ಮುಂಬೈ: ಗಜನಿ ಚಿತ್ರದ ಮೂಲಕ ಟಾಲಿವುಡ್, ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಾಯಕಿ ನಟಿ ಆಸಿನ್ ತೊಟ್ಟುಮಕ್ಕಲ್ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.

 
ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ಕಳೆದ ವರ್ಷ ಮದುವೆಯಾಗಿದ್ದ ಆಸಿನ್ ಅಕ್ಟೋಬರ್ 24 ರಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ. ಈ ವಿಷಯವನ್ನು ರಾಹುಲ್ ಶರ್ಮಾ ಮತ್ತು ಆಸಿನ್ ಇಬ್ಬರೂ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

ಆಸಿನ್ ಗೆ ರಾಹುಲ್ ಶರ್ಮಾರನ್ನು ಪರಿಚಯಿಸಿದ್ದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್. ಹೀಗಾಗಿ ಅಕ್ಷಯ್ ಕೂಡಾ ಇವರಿಬ್ಬರಿಗೆ ಶುಭ ಹಾರೈಸಿದ್ದಾರಲ್ಲದೆ, ಮಗುವಿನೊಂದಿಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ