ಅಗ್ರಜ ಟ್ರೈನ್ ನಲ್ಲಿ ಜಗ್ಗೇಶ್ ಸರ್ !

ಮಂಗಳವಾರ, 28 ಜನವರಿ 2014 (10:17 IST)
PR
ಜಗ್ಗೇಶ್ ನಟನೆಯ ಅಗ್ರಜ ಚಿತ್ರದ ಬಗ್ಗೆ ನಾವು ಈಗಾಗಲೇ ತಿಳಿಸಿದ್ದೇವೆ.. ಆ ಚಿತ್ರತಂಡ ಇತ್ತೀಚಿಗೆ ಮೈಸೂರಿಗೆ ಹೋಗಿದ್ದರು.ಅವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಟ್ರೈನ್ ಮೇಲೆ ಈ ಚಿತ್ರದ ಪೋಸ್ಟರ್ಗಳನ್ನು ಹಾಕುವ ಅಜೆಂಡಾ ಅವರದ್ದಾಗಿತ್ತು.

ಈ ಚಿತ್ರದ ನಾಯಕನಟ ಸಂಸದ ಜಗ್ಗೇಶ್ ಅವರ ಪ್ಲಾನ್ ಇದಾಗಿತ್ತು. ಇದರ ಬಗ್ಗೆ ಟ್ವೀಟ್ ಮಾಡಿದ ಅವರು ಮೈಸೂರಿನ ಅಗ್ರಜಾ ಟ್ರೈನ್ ಗು ಸಹ ಇದೆ ವಿಧಾನವನ್ನು ಬಳಸುತ್ತಾರಂತೆ.

ಇದು ರೀಮೇಕ್ ಚಿತ್ರವಲ್ಲವಂತೆ ಆದರೆ ಆರ್ ಆರ್ ಪಟ್ನಾಯಕ್ ಅವರ ಚಿತ್ರದ ಸ್ಫೂರ್ತಿಯಿಂದ ಈ ಚಿತ್ರ ತಯಾರಿಸಿದ್ದಾರಂತೆ. ಅಂದಂಗೆ ಈ ಚಿತ್ರದಲ್ಲಿ ಜಗ್ಗೇಶ್ ಬ್ರೋಕರ್ ಪಾತ್ರದಲ್ಲಿ ಇದ್ದಾರೆ. ಚಾಲೆಂಗಿಂಗ್ ಸ್ಟಾರ್ ದರ್ಶನ್ ಸರ್ಕಾರಿ ಅಧಿಕಾರಿಯಾಗಿದ್ದಾರೆ ಈ ಚಿತ್ರದಲ್ಲಿ .

ವೆಬ್ದುನಿಯಾವನ್ನು ಓದಿ