ನಾನು ಕತ್ರೀನಾ ಕೈಫ್ ಅವರೊಂದಿಗೆ ಇನ್ನೊಂದು ಸಿನಿಮಾ ಮಾಡಬೇಕು-ಅಲಿ ಅಬ್ಬಾಸ್ ಜಾಫರ್

ಸೋಮವಾರ, 11 ಜುಲೈ 2016 (08:30 IST)
ಮೊನ್ನೆ ತಾನೇ ರಿಲೀಸ್ ಆಗಿರುವ ಸುಲ್ತಾನ್ ಸಿನಿಮಾ ಬಾಕ್ಸಾಫೀಸ್ ನಲ್ಲಿ  ಬಿರುಗಾಳಿಯೆಬ್ಬಿಸಿದೆ. ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರ ಕರಿಯರ್ ಗೆ ಸುಲ್ತಾನ್ ಸಿನಿಮಾ ಉತ್ತಮ ಬ್ರೇಕ್ ನೀಡಿದೆ. ಹೀಗಿರುವಾಗಲೇ ಅಲಿ ಅಬ್ಬಾಸ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಒಂದಷ್ಟು ಮಾಹಿತಿ ಹೊರ ಹಾಕಿದ್ದಾರೆ.

ಹೌದು. ಅಲಿ ಅಬ್ಬಾಸ್ ಜಾಫರ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಹೇಳಿದ್ದಾರೆ. ಆದ್ರೆ ಆ ಸಿನಿಮಾಕ್ಕೆ ತನಗೆ ಕತ್ರೀನಾ ಕೈಫ್ ಅವರನ್ನೇ ನಾಯಕಿಯಾಗಿ ಮಾಡಬೇಕು ಅನ್ನೋದು ಆಸೆ ಅಂತಾ ಅವರು ಹೇಳಿದ್ದಾರೆ. ಈ ಹಿಂದೆ 2011ರಲ್ಲಿ ತೆರೆ ಕಂಡ ಅಲಿ ಅಬ್ಬಾಸ್ ಜಾಫರ್ ಅವರ ಮೇರೆ ಬ್ರದರ್ ಕಿ ದುಲ್ಹನಿಯಾ ಸಿನಿಮಾದಲ್ಲಿ ಕತ್ರೀನಾ ಕೈಫ್ ಅವರು ಅಭಿನಯಿಸಿದ್ದರು.ಆ ಬಳಿಕ ಕತ್ರೀನಾ ಕೈಫ್ ಅವರು ಅಲಿ ಅವರ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ.ಆದ್ರೆ ಇತ್ತೀಚೆಗೆ ಅಲ ಅಬ್ಬಾಸ್ ಜಾಫರ್ ಅವರು ನೀಡಿದ ಸಂದರ್ಶನವೊಂದರಲ್ಲಿ ತಾನು ಕ್ತರೀನಾ ಕೈಫ್ ಅವರೊಂದಿಗೆ ಸಿನಿಮಾ ಮಾಡಲು ಬಯಸುತ್ತೇನೆ ಅಂತಾ ಹೇಳಿದ್ದಾರೆ.
 
ಅಲ್ಲದೇ ಆಕೆ ನನ್ನ ಫ್ರೆಂಡ್.ನಾನು ಅವಳಿಗಾಗಿ ಸಿನಿಮಾ ಮಾಡಿದ್ರೆ ನಮ್ಮ ಬಾಂಧವ್ಯ ಇನ್ನಷ್ಟುಗಟ್ಟಿಯಾಗುತ್ತೆ.ಈ ಹಿಂದೆ ನನ್ನ ಮೇರೆ ಬ್ರದರ್ ಕಿ ದುಲ್ಹನಿಯಾ ಸಿನಿಮಾದಲ್ಲಿ ಆಕೆ ಮಾಡಿದ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು ಅಂತಾ ಅವರು ಹೇಳಿದ್ದಾರೆ.
ಇನ್ನು ಇದರ ಮಧ್ಯೆಯೇ ಅಲಿ ಅಬ್ಬಾಸ್ ಜಾಫರ್ ಅವರು ಸುಲ್ತಾನ್ -2 ಸಿನಿಮಾ ಮಾಡುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈಗಾಗಾಲೇ ಅಲಿ ಅಬ್ಬಾಸ್ ಜಾಫರ್ ಅವರು ಇದಕ್ಕಾಗಿ ಸ್ಕ್ರಿಫ್ಟ್ ಕೂಡ ಮಾಡಿಕೊಂಡಿದ್ದಾರಂತೆ. ಸಲ್ಮಾನ್ ಖಾನ್ ಅವರೇ ಈ ಸಿನಿಮಾದಲ್ಲೂ ಅಭಿನಯಿಸಿದ್ರೆ ಕತ್ರೀನಾ ಅವರನ್ನು ಸಿನಿಮಾಕ್ಕೆ ನಾಯಕಿಯಾಗಿ ಮಾಡಿಕೊಂಡ್ರು ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ