ಅವಕಾಶಗಳಿಲ್ಲದೇ ಪರದಾಡುತ್ತಿರುವ ತ್ರಿಶಾಳಿಗೆ ಜೀವದಾನ ಮಾಡುತ್ತಾ ಕನ್ನಡ ಸಿನಿಮಾ ?

ಗುರುವಾರ, 2 ಜನವರಿ 2014 (12:48 IST)
PR
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನಗೊಂದು ಉತ್ತಮ ಸ್ಥಾನ ಗಳಿಸಿರುವ ನಟಿ ತ್ರಿಶಾ. ಆಕೆಯು ಆ ಎರಡು ಭಾಷೆಯ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾಳೆ. ತ್ರಿಶಾ ಜೊತೆ ನಟಿಸುವುದೇ ತಮ್ಮ ಸೌಭಾಗ್ಯ ಎಂದು ಸೂಪರ್ ಹೀರೋಗಳು ಕಾಯುವಂತಹ ಟ್ರೆಂಡ್ ಇತ್ತು ಒಮ್ಮೆ. ಆಕೆಯ ಕಾಲ್ ಶೀಟ್ ಗಾಗಿ ವರ್ಷ ಪೂರ್ತಿ ಕಾದು ನಂತರ ನಟಿಸಿದ್ದ ಕಲಾವಿದರು ಇದ್ದಾರೆ.

ಆದರೆ ಕಾಲಾಯ ತಸ್ಮೈ ನಮಃ ಅಂತಾರಲ್ಲ ಹಾಗೆ ಅಂತಹ ತ್ರಿಶಾಳ ಕಾಲ ಈಗ ಹೇಳಿಕೊಳ್ಳುವಂತೆ ಇಲ್ಲ. ಯಶಸ್ಸಿನ ಸುರಿಮಳೆಯನ್ನೇ ನೀಡಿದ್ದಾ ತ್ರಿಶಾ ಪರಿಸ್ಥಿತಿ ಈಗ ಅಷ್ಟೇನೂ ಚೆನ್ನಾಗಿಲ್ಲ ಎಂದೇ ಹೇಳ ಬಹುದಾಗಿದೆ.

ಆದರೆ ಈಗ ಆ ಚಿತ್ರರಂಗಗಳಲ್ಲಿ ಚಾಲ್ತಿ ಇಲ್ಲದ ನಟಿಯು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಮತ್ತು ತಮಿಳಿನಲ್ಲಿ ಒಂದು ಚಿತ್ರದಲ್ಲಿ ತೆಲುಗಿನಲ್ಲಿ ಸಹ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ.

ಈ ಮೂರು ಚಿತ್ರಗಳು ಆಕೆಯ ತಾರ ಬದುಕನ್ನು ಮತ್ತೆ ಜೀವಂತ ಮಾಡುವುದೋ ಇಲ್ಲವೋ ಸದ್ಯಕ್ಕೆ ತಿಳಿದಿಲ್ಲ, ಆದರೂ ಯಾವುದಾದರೂ ಸರಿಯೇ ಸಿಕ್ಕ ಹೀರೋ ಜೊತೆ ಮಾಡ್ತೀನಿ ಎನ್ನುವ ಮಟ್ಟಕ್ಕೆ ಬಂದು ತಲುಪಿದ್ದ ಈಕೆಗೆ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸುವ ಅವಕಾಶವು ನಿಜಕ್ಕೂ ಜೀವನಾಮೃತ ನೀಡಿದೆ ಅಂತಿದ್ದಾರೆ ಟಾಲಿವುಡ್ ಮಂದಿ .

ವೆಬ್ದುನಿಯಾವನ್ನು ಓದಿ