ಇಂದಿನಿಂದ ಆಟಗಾರನ ಅಸಲಿ ಆಟ ಶುರು

ಶುಕ್ರವಾರ, 28 ಆಗಸ್ಟ್ 2015 (10:35 IST)
ಕನ್ನಡದಲ್ಲಿ ಸದ್ದಿಲ್ಲದೇ ತನ್ನ ಶೂಟಿಂಗ್ ಮುಗಿಸಿ ಥ್ರಿಲ್ಲಿಂಗ್ ಸಿನಿಮಾವೊಂದು ಇವತ್ತು ಪ್ರೇಕ್ಷಕರೆದುರಿಗೆ ಬಂದಿದೆ. ಅದೇ ಆಟಗಾರ ಸಿನಿಮಾ. ರಿಯಾಲಿಟಿ ಶೋವೊಂದರ ಕಥಾಹಂದರ ಹೊಂದಿರುವ ಈ ಸಿನಿಮಾ  ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿತ್ತು.


 
ಆಟಗಾರ ಸಿನಿಮಾ ದ್ವಾರಕೀಶ್ ನಿರ್ಮಾಣದ 49 ನೇ ಸಿನಿಮಾವಾಗಿದ್ದು,  ಅಪರಿಚಿತ ದ್ವೀಪವೊಂದರಲ್ಲಿ ನಡೆಯೋ ರಿಯಾಲಿಟಿ ಶೋವೊಂದರ ಕುರಿತಾಗಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ಸಿನಿಮಾವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದಾರೆ.
 
ಈ ಸಿನಿಮಾದ ಪ್ರಮುಖ ಆಕರ್ಷಣೆ ಅಂದ್ರೆ ಸಿನಿಮಾದಲ್ಲಿರುವ ಕಲಾವಿದರು. ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ, ಹೀಗೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಇನ್ನು ಈ ಸಿನಿಮಾಕ್ಕೆ ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದು, ಅನೂಪ್ ,ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ