ಆಸ್ಕರ್ ಪಟ್ಟಿ ತಯಾರಿಕೆಯಲ್ಲಿ ಕವಿತಾ ಲಂಕೇಶ್ ಬ್ಯುಸಿ

ಶುಕ್ರವಾರ, 13 ಸೆಪ್ಟಂಬರ್ 2013 (11:34 IST)
PR
ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿತ್ವ ನಿದರ್ೇಶಕಿ ಲೇಖಕಿ ಕವಿತಾ ಲಂಕೇಶ್ ಅವರದ್ದು. ಸದಾ ಬ್ಯುಸಿ ಆಗಿರುವ ಕವಿತಾ ಈಗ ತೀಪರ್ುಗಾರರಾಗಿ ಕೆಲಸ ಮಾಡುತ್ತಿದ್ದಾರಂತೆ. ಇತ್ತೀಚೆಗಷ್ಟೇ ಟೈಮ್ಸ್ ಆಫ್ ಇಂಡಿಯಾದ ಐ ಲೀಡ್ ಇಂಡಿಯಾ ಆಂದೋಲನದ ಜ್ಯೂರಿ ಆಗಿದ್ದವರು, ಆ ಬಳಿಕ ಜಾಹಿರಾತು ಪ್ರಪಂಚದಲ್ಲಿ ನೀಡುವ ಪ್ರತಿಷ್ಟಿತ ಬಿಗ್ ಬ್ಯಾಂಗ್ ಪ್ರಶಸ್ತಿಯ ಆಯ್ಕೆ ಕಮಿಟಿಯಲ್ಲಿ ಕೆಲಸ ಮಾಡಿದರು.

ಸದ್ಯ ಅವರು ಕರ್ನಾಟಕ ಹೆಮ್ಮೆ ಪಡಬಹುದಾದ ಕೆಲಸ ಮಾಡುತ್ತಿದ್ದಾರೆ. ಅವರೀಗ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರೋದ್ಯಮದಿಂದ ಪ್ರವೇಶ ಪಡೆಯುವ ಚಿತ್ರಗಳ ಆಯ್ಕೆ ಕಮಿಟಿಯ ಸದಸ್ಯರಾಗಿದ್ದಾರೆ. ಇವರ ಸಮಿತಿ ಆಯ್ಕೆ ಮಾಡಿ ಕಿಸುವ ಚಿತ್ರಗಳು ಬೆಸ್ಟ್ ವಿದೇಶಿ ಭಾಷೆಯ ಚಿತ್ರಗಳ ಕೆಟಗರಿಯಲ್ಲಿ ಪ್ರಶಸ್ತಿಗೆ ಸ್ಪರ್ದಿಸಲಿವೆ. ಇಂತಹ ಅವಕಾಶ ಸಿಕ್ಕಿದ್ದೇ ತುಂಬಾ ಖುಷಿ ಆಗುತ್ತಿದೆ ಹಾಗೂ ಹೆಮ್ಮೆ ಎನಿಸುತ್ತಿದೆ. ಒಳ್ಳೆಯ ಚಿತ್ರಗಳನ್ನು ನೋಡುವ ಅವಕಾಶ ಈ ಮೂಲಕ ನನಗೆ ಲಭಿಸಿದೆ. ಒಳ್ಳೆಯದನ್ನು ಗುರುತಿಸುವ ಕೆಲಸ ಯಾವಾಗಲೂ ನಡೆಯಬೇಕು. ಈಗ ಆ ಜವಾಬ್ದಾರಿ ನನಗೆ ಸಿಕ್ಕಿದೆ ಎಂದು ಹೇಳಿಕೊಳ್ಳಲು ಖುಷಿ ಆಗುತ್ತದೆ ಎಂದಿದ್ದಾರೆ ಕವಿತಾ ಲಂಕೇಶ್.

ವೆಬ್ದುನಿಯಾವನ್ನು ಓದಿ