ಇವನು ಸಚಿನ್ ...ಆದರೆ ತೆಂಡೂಲ್ಕರ್ ಅಲ್ಲ.. !

ಮಂಗಳವಾರ, 4 ಮಾರ್ಚ್ 2014 (10:27 IST)
PR
ಸಚಿನ್ .. ತೆಂಡೂಲ್ಕರ್ ಅಲ್ಲ .. ಇಂತಹ ಹೆಸರಿನ ಚಿತ್ರವೊಂದು ಸದ್ದಿಲ್ಲದೇ ತನ್ನ ಬಹುಪಾಲು ಕೆಲಸವನ್ನು ಪೂರ್ಣ ಮಾಡಿದೆ. ಈ ಚಿತ್ರದಲ್ಲಿ ಸುಹಾಸಿನಿ, ಕ್ರಿಕೆಟ್ ಪಟು ವೆಂಕಟೇಶ್ ಪ್ರಸಾದ್ ಮತ್ತು ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರದ ನಿರ್ದೇಶಕ ಮೋಹನ್.

ಇವರು ಈ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ್ದಾರೆ . ಈ ಚಿತ್ರದಲ್ಲಿ ಬಹುಭಾಷಾ ನಟಿ ಸುಹಾಸಿನಿ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧಾರಾಣಿ ಪ್ರಿನ್ಸಿಪಾಲ್ ಪಾತ್ರ ದಲ್ಲಿ ಮಿಂಚುತ್ತಿದ್ದಾರೆ. 'ಸಚಿನ್‌'. 'ತೆಂಡುಲ್ಕರ್ ಅಲ್ಲ' ಎನ್ನುವುದು ಉಪ ಶೀರ್ಷಿಕೆ ಹೊಂದಿರುವ ಚಿತ್ರದ ಮುಖ್ಯ ಕಥಾಹಂದರ.

ವೆಬ್ದುನಿಯಾವನ್ನು ಓದಿ