ಏನೋ ಒಂಥರಾದ ಗತಿ ನಿಜಕ್ಕೂ ಏನೋ ಒಂಥರಾ!

MOKSHA
ಚಿತ್ರದ ಹೆಸರು ಇದೀಗ ನಿಜವಾಗುತ್ತಿದೆ. ಏನೋ ಒಂಥರಾ ಎಂಬ ಈ ಚಿತ್ರ ನಿಜಕ್ಕೂ ಇದೀಗ ಬಿಡುಗಡೆಯ ವಿಚಾರಕ್ಕೆ ಬಂದಾಗ ಏನೋ ಒಂಥರಾ ಆಗಿಬಿಟ್ಟಿದೆ ಎಂದು ಹೇಳದೆ ವಿಧಿಯಿಲ್ಲ.

ಹೌದು, ಗಣೇಶ್- ಪ್ರಿಯಾಮಣಿ ಜೋಡಿಯ ಈ ಚಿತ್ರ ಈ ವಾರ ತೆರೆ ಕಾಣುತ್ತದೆ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದ ನಿರ್ಮಪಕರು ಏಕಾಏಕಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದರು. ಇದೀಗ ಇದೇ ತಿಂಗಳ ಕೊನೆಯಲ್ಲಿ ಚಿತ್ರದ ಬಿಡುಗಡೆ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಆ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.

ಏಕೆಂದರೆ ಸದ್ಯ ಕನ್ನಡದಲ್ಲಿ ಕೃಷ್ಣನ್ ಲವ್ ಸ್ಟೌರಿ, ಪಂಚರಂಗಿ ಸೇರಿದಂತೆ ಹಲವು ಚಿತ್ರಗಳು ಅತ್ಯಂತ ಯಶಸ್ವಿಯಾಗಿ ಓಡುತ್ತಿವೆ. ಅದರ ಜತೆ ಬಹು ನೀರೀಕ್ಷೆಯ ಚಿತ್ರಗಳಾದ ಪುನೀತ್ ಅವರ ಜಾಕಿ ಬಿಡುಗಡೆಯಾಗಿದೆ. ಸುದೀಪ್‌ರ ಕಿಚ್ಚ ಹುಚ್ಚ ಕೂಡಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಇವೆಲ್ಲಾ ಒಂದು ಹಂತದಲ್ಲಿ ಉತ್ತಮವಾಗಿ ಓಡುವ ನಿರೀಕ್ಷೆ ಹೊಂದಿವೆ. ಹೀಗಿರುವಾಗ ಚಿತ್ರ ಸಾಲು ಸಾಲಾಗಿ ಗೆಲ್ಲುತ್ತಿದ್ದರೆ, ಏನೋ ಒಂಥರಾವೂ ಬಿಡುಗಡೆ ಆದರೆ ಓಡುವುದಾ ಅನ್ನುವ ಅನುಮಾನ ಚಿತ್ರತಂಡವನ್ನು ಕಾಡುತ್ತಿದೆ.

ಒಂದು ಕಾಲದಲ್ಲಿ ನಂ.1 ಆಗಿದ್ದ ಗಣೇಶ್ ಇಂದು ಚಿತ್ರದ ಬಿಡುಗಡೆಗೆ ತಿಣುಕಾಡುವ ಪರಿಸ್ಥಿತಿ ಇದೆ. ಇನ್ನೊಂದೆಡೆ ಇವರ ಕೂಲ್ ಚಿತ್ರದ ಚಿತ್ರೀಕರಣವೂ ನಡೆದಿದ್ದು, ಅದೂ ಬಿಡುಗಡೆಗೆ ಸಮೀಪವಾಗುತ್ತಿದೆ. ಅಷ್ಟರ ಒಳಗೆ ಏನೋ ಒಂಥರಾ ಬಂದು ಹೋಗಲಿ ಅಂತ ಕಾಯುತ್ತಿದ್ದರೆ, ಚಿತ್ರ ಡಬ್ಬದಿಂದ ಆಚೆ ಬರುವ ಸೂಚನೆಯನ್ನೇ ನೀಡುತ್ತಿಲ್ಲ.

ನಿರ್ಮಾಪಕ ಎಂ. ಚಂದ್ರಶೇಖರ್ ಹಾಕಿದ ಹಣವಾದರೂ ಮರಳಿ ಬಂದರೆ ಸಾಕು ಅಂತ ಹಲುಬಿಕೊಳ್ಳುತ್ತಿದ್ದಾರಂತೆ. ಚಿತ್ರವನ್ನು ಸಾಲ ಮಾಡಿ ಮಾಡಿದ್ದೇನೆ. ಅದಷ್ಟು ಸಿಕ್ಕರೆ ಸಾಕು ಅನ್ನುವ ಭಾವನೆ ಇವರದ್ದು. ಮುಸ್ಸಂಜೆ ಮಹೇಶ್ ನಿರ್ದೇಶಕರಾಗಿದ್ದು, ಇವರು ಸಹ ತಮ್ಮ ಭವಿಷ್ಯದ ನಿರೀಕ್ಷೆಯಲ್ಲಿದ್ದಾರೆ. ನಟ ಗಣೇಶ್ ಪಾಲಿಗೂ ಈ ಚಿತ್ರ ಬಹಳ ಮಹತ್ವದ್ದಾಗಿದೆ. ಎಲ್ಲಾ ಏನಾಗುತ್ತದೆಯೋ ದೇವರೇ ಬಲ್ಲ.

ಏನೋ ಒಂಥರಾ ಚಿತ್ರದ ಮತ್ತಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

NRB

ವೆಬ್ದುನಿಯಾವನ್ನು ಓದಿ