ಒಂಟಿಮನೆಯಲ್ಲಿ ವಿನೋದ್ ಆಳ್ವ

ವಿನೋದ್ ಆಳ್ವ ಕನ್ನಡ ಚಿತ್ರರಂಗದಲ್ಲಿ ಚಿರ ಪರಿಚಿತ ಹೆಸರು. ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಇವರು ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಒಂಟಿ ಮನೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಚಿತ್ರೀಕರಣಗೊಂಡಿದ್ದ ಒಂಟಿ ಮನೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಇತ್ತೀಚೆಗಷ್ಟೆ ನಡೆದಿದೆ.

ಒಂಟಿ ಮನೆ ಚಿತ್ರದಲ್ಲಿ ವಿನೋದ್ ಆಳ್ವ ನಾಯಕನಾದರೆ ನಾಯಕಿಯಾಗಿ ದಿವ್ಯ ನಟಿಸುತ್ತಿದ್ದಾರೆ. ಚಿತ್ರವನ್ನು ವೈ.ಎಸ್.ವಿಠಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಚಿತ್ರವಂತೆ. ವಿಠಲ್ ಕುಮಾರ್ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದಿದ್ದಾರೆ. ಒಂಟಿ ಮನೆ ಇವರ ನಿರ್ದೇಶನದ ಮೊದಲ ಚಿತ್ರ.

ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇಪ್ಪತ್ತೈದು ವರ್ಷಗಳ ಅನುಭವವನ್ನು ಹಾಕಿ ಚಿತ್ರ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮಾಡಿದ್ದೇನೆ. ಇದೊಂದು ವಿಚಿತ್ರ ಚಿತ್ರ. ಒಂಟಿ ಮನೆಯೊಂದರಲ್ಲಿ ಆರೇಳು ಕೊಲೆಗಳು ನಡೆಯುತ್ತವೆ. ಅದನ್ನು ಯಾರು ಮಾಡಿದರು, ಯಾಕೆ ಮಾಡುತ್ತಾರೆ ಎನ್ನುವುದೇ ಸಸ್ಪೆನ್ಸ್. ಚಿತ್ರವನ್ನು ಚೆನ್ನಾಗಿ ಮಾಡಿದ್ದೇನೆ ಎಂಬ ಭರವಸೆ ನನಗಿದೆ ಎಂದು ಪದೇ ಪದೇ ಹೇಳುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಸಾಹಿತಿ ದೊಡ್ಡರಂಗೇಗೌಡರು ಚಿತ್ರಕ್ಕೆ ಹಾಡು ಬರೆದಿದ್ದಾರೆ. ಹಾಡುಗಳು ಚೆನ್ನಾಗಿವೆಯಂತೆ. ಲಯೇಂದ್ರ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ