ಒಂದಾದ ಕಿಚ್ಚ ಸುದೀಪ್ ಮತ್ತು ಯೋಗರಾಜ್ ಭಟ್

ಶುಕ್ರವಾರ, 17 ಜನವರಿ 2014 (11:28 IST)
PR
ಕಿಚ್ಚ ಸುದೀಪ್ ಮತ್ತು ಯೋಗರಾಜ್ ಭಟ್ ಅವರು ಮತ್ತೆ ಒಂದಾಗುತ್ತಿದ್ದಾರೆ. ರಂಗ ಎಸೆಸೆಲ್ಸಿ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ಕಳೆದ ಹತ್ತು ವರ್ಷಗಳ ಬಳಿಕ ಒಟ್ಟಿಗೆ ಕೆಲಸ ಮಾಡಲು ಹೊರಟಿದ್ದಾರೆ ಎರಡು ಪ್ರತಿಭೆಗಳು. ಆದರೆ ಸಂಪೂರ್ಣವಾಗಿ ಒಟ್ಟಿಗೆ ಕೆಲಸ ಮಾಡದೆ ಅಲ್ಪ ಸಮಯ ಮಾತ್ರ ಜೊತೆಯಾಗಿರುತ್ತಾರಂತೆ.ಯೋಗರಾಜ್ ಭಟ್ ಕಿಚ್ಚ ಸುದೀಪ್ ಅವರಿಗೆಂದು ಹಾಡನ್ನು ಸಿದ್ಧಪಡಿಸಿದ್ದಾರೆ ವಿಶೇಷವಾಗಿ. ಅದನ್ನು ಕಿಚ್ಚ ಅವರ ಮುಂದೆ ಇತ್ತು ಆಗಿದೆ. ಇದೊಂದು ಆಸಕ್ತಿಕರ ಮತ್ತು ಖುಷಿ ನೀಡುವ ಹಾಡು ಇದನ್ನು ನನ್ನ ಮುಂದಿನ ಪ್ರಾಜಕ್ಟ್ ನಲ್ಲಿ ಬಳಸಿಕೊಳ್ಳುವೆ ಎಂದು ಹೇಳಿದ್ದಾರೆ ಸುದೀಪ್. ಕಿಚ್ಚ ಮತ್ತು ಭಟ್ಟರು 2012 ರಲ್ಲಿ ಒಟ್ಟಿಗೆ ಕೆಲಸ ಮಾಡುವುದಾಗಿ ಗಾಂಧಿನಗರಿಗರು ಮಾತನಾಡಿಕೊಳ್ಳುತ್ತಿದ್ದರು.

ಆದರೆ ಅಂತಹ ಯಾವುದೇ ರೀತಿಯ ಕೆಲಸವೂ ಆಗಿರಲಿಲ್ಲ ಆದರೆ ಈಗ ಅದು ಸಾಕಾರವಾಗುತ್ತಿದೆ. ಹತ್ತು ವರ್ಷಗಳ ಬಳಿಕ ಇಬ್ಬರು ಮತ್ತೆ ಒಟ್ಟಿಗೆ ಆಗುವುದರ ಮುಖಾಂತರ ಅವರ ಅಭಿಮಾನಿಗಳಿಗೆ ಖುಷಿ ಹಂಚಲು ಸಿದ್ಧ ಆಗಿದ್ದಾರೆ. ಚಿತ್ರ ಮಾಡಲು ಸೂಕ್ತವಾದ ಸ್ಕ್ರಿಪ್ಟ್ ದೊರೆತ ತಕ್ಷಣ ತಾವು ಚಿತ್ರವನ್ನು ಸಿದ್ಧ ಪಡಿಸುವುದಾಗಿ ಕಿಚ್ಚ ಹೇಳಿದ್ದಾರೆ. ಸೊ ಅಲ್ಲಿವರೆಗೂ !ಅಲ್ಲದೆ ಕಿಚ್ಚ ಮತ್ತು ಸುದೀಪ್ ತಾವು ಒಪ್ಪಿಕೊಂಡಿರುವ ಕೆಲಸದಲ್ಲಿ ಬ್ಯುಸಿಆಗಿದ್ದಾರೆ. ಮುಖ್ಯವಾಗಿ ಅವರ ಒಪ್ಪಿಕೊಂಡಿರುವ ಕೆಲಸಗಳನ್ನು ಪೂರೈಸಿದ ಬಳಿಕ ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ. ಸುದೀಪ್ ಮಾಣಿಕ್ಯದಲ್ಲಿ ಮತ್ತು ಭಟ್ಟರು ಬಾಲಿವುಡ್ ಸಿನ್ಮಾ ನಿರ್ಮಾಣದಲ್ಲಿ ಮಗ್ನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ