ಒಂದೇ ದಿನದಲ್ಲಿ ದಾಖಲೆ ಬರೆದ ಕೊಚಾಡಿಯನ್‌ ಟ್ರೇಲರ್‌.

ಗುರುವಾರ, 12 ಸೆಪ್ಟಂಬರ್ 2013 (11:31 IST)
PR
PR
ರಜಿಕಾಂತ್‌ ಅಭಿನಯದ ಕೊಚಾಡಿಯನ್‌ ಟ್ರೇಲರ್‌ ಮತ್ತೊಂದು ಹೊಸ ದಾಖಲೆ ಬರೆದಿದೆ. ಟ್ರೇಲರ್‌ ಬಿಡುಗಡೆಯಾದ ದಿನವೇ ಐದು ಲಕ್ಷಕ್ಕೂ ಹೆಚ್ಚು ಜನರು ಈ ಟ್ರೇಲರ್‌ ವೀಕ್ಷಿಸಿದ್ದು, ಚಿತ್ರದ ಬಗೆಗಿನ ನಿರೀಕ್ಷೆಗಳು ಇದೀಗ ಇನ್ನಷ್ಟು ಹೆಚ್ಚಾಗಿವೆ. ಇಷ್ಟುದಿನ ಸೂಪರ್ ಸ್ಟಾರ್ ರಜನಿ ಅವರನ್ನು ಹೊಸ ಗೆಟಪ್‌ನಲ್ಲಿ ನೋಡಿ ಇಷ್ಟಪಟ್ಟಿದ್ದ ಮಂದಿಗೆ ಈ ಚಿತ್ರಲ್ಲಿಯೂ ಕೂಡ ಕೂಡ ಹಬ್ಬದೂಟವೇ ಸಿಗಲಿದೆ.

ದೀಪಾವಳಿ ವೇಳೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಗಣೇಶನ ಹಬ್ಬದಂದು ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಈ ತುಣುಕು ವೀಡಿಯೋವನ್ನು ವೀಕ್ಷಿಸಿದ್ದಾರೆ. ಈರೋಸ್ ಇಂಟರ್ನ್ಯಾಷನಲ್ ಹೊರತಂದಿರುವ ಈ ಟೀಸರ್ ಎಲ್ಲರ ಗಮನವನ್ನು ಸೆಳೆದಿದೆ. ಇದನ್ನು ರೂಪಿಸುವಲ್ಲಿ ಅವರ ಪುತ್ರಿ ಸೌಂದರ್ಯ ಅವರ ಪರಿಶ್ರಮ ಸಾಕಷ್ಟಿದೆ ಎಂಬುದನ್ನು ಮರೆಯಬಾರದು.

ಆನಿಮೇಷನ್ ತಂತ್ರಜ್ಞಾನಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದ ಪೋಸ್ಟರ್ಗಳಿಗೆ ಸಿಕ್ಕ ಪ್ರಶಂಸೆಯಂತೆ ಟೀಸರ್ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟ್ಟರ್ನಲ್ಲೂ ಸೌಂದರ್ಯ ಅವರನ್ನು ಹಾಡಿ ಕೊಂಡಾಡಲಾಗಿದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು ಪಾಂಡ್ಯ ಅರಸು ಕೊಚಾಡಿಯನ್ ರಣಧೀರನ್ ಸಾಹಸದ ಕಥೆಯನ್ನೊಳಗೊಂಡಿದೆ. ರಜನಿ ಜೊತೆ ದೀಪಿಕಾ ಪಡುಕೋಣೆ, ಜಾಕಿಶ್ರಾಫ್, ಶರತ್ಕುಮಾರ್, ಶೋಭನಾ, ಆದಿ ಮತ್ತಿಬ್ಬರು ಕಲಾವಿದರಿದ್ದಾರೆ

ವೆಬ್ದುನಿಯಾವನ್ನು ಓದಿ