ಕಥೆ ಕದ್ದ ಆರೋಪ : ಈಟಿವಿ "ಅಕ್ಕ" ಧಾರಾವಾಹಿ ಪ್ರಸಾರಕ್ಕೆ ಬ್ರೇಕ್.

ಶುಕ್ರವಾರ, 29 ನವೆಂಬರ್ 2013 (17:59 IST)
PR
PR
ವಿಶೇಷ ವರದಿ : ಶೇಖರ್‌ ಪೂಜಾರಿ

ಡಿಸೆಂಬರ್‌ 2 ರಿಂದ ಈಟಿವಿಯಲ್ಲಿ ಪ್ರಸಾರವಾಗಬೇಕಿದ್ದ "ಅಕ್ಕ" ಧಾರಾವಾಹಿಗೆ ಬ್ರೇಕ್ ಬಿದ್ದಿದೆ. ಲೇಖಕಿ ರೇಖಾ ರಾಣಿಯವರ "ಕಣ್ಮ್ಣಣಿ" ಕಥೆಯನ್ನು ಕದ್ದು ಈಟಿವಿಯಲ್ಲಿ "ಅಕ್ಕಾ" ಧಾರವಾಹಿಯಾಗಿ ಪರದೆ ಮೇಲೆ ತರಲು ಅಕ್ಕಾ ಧಾರಾವಾಹಿ ತಂಡ ಪ್ರಯತ್ನ ಮಾಡಿತ್ತು. ಹೀಗಾಗಿ ರೇಖಾ ರಾಣಿಯವರ ಕಥೆಯನ್ನು ಕದ್ದ ಆರೋದಲ್ಲಿ ಸಿಲುಕಿರುವ ಅಕ್ಕಾ ಧಾರಾವಾಹಿ ಮತ್ತು ತಂಡಕ್ಕೆ ಸಿಟಿ ಸಿವಿಲ್ ಕೋರ್ಟ್ ಶಾಕ್ ನೀಡಿದೆ. ಅಕ್ಕಾ ಧಾರಾವಾಹಿಯ ಪ್ರಸಾರಕ್ಕೆ ತಡೆ ನೀಡುವ ಮೂಲಕ ಮೂಲ ಲೇಖಕಿ ರೇಖಾ ರಾಣಿಯವರಿಗೆ ನಿರಾಳತೆಯನ್ನು ನೀಡಿದೆ.

ಕಣ್ಮಣಿ ಧಾರಾವಾಹಿಯಲ್ಲಿ ಇದ್ದ ಪಾತ್ರಗಳು ಈ "ಅಕ್ಕಾ" ಧಾರಾವಾಹಿಗಳಲ್ಲಿ ಮರು ಜೀವ ಪಡೆದುಕೊಂಡಿವೆ. ಅಷ್ಟೆ ಅಲ್ಲ, ಅವಳಿ ಜವಳಿಗಳಲ್ಲಿ ಒಬ್ಬಳು ತುಂಬಾ ಮೃದು, ಮತ್ತೊಬ್ಬಳು ಜೋರು, ಒಬ್ಬಳು ಅಪಘಾತದಲ್ಲಿ ಸಾಯುವುದು (ಕೊಲೆಯಾಗುವುದು).. ಇನ್ನೊಬ್ಬಳು ಮತ್ತೊಬ್ಬಳ ಹೆಸರಿನಲ್ಲಿ ಬದುಕುವುದು... ಒಬ್ಬ ಅವಳಿಯನ್ನು ಪ್ರೀತಿಸಿದ ಗಂಡು ಮತ್ತೊಬ್ಬ ಅವಳಿಯನ್ನು ಮದುವೆಯಾಗುವುದು.. ಇತ್ಯಾದಿ ವಿಷಯಗಳನ್ನು ಅಕ್ಕಾ ಧಾರಾವಾಹಿ ಒಳಗೊಂಡಿದೆ. ಆದ್ರೆ ಈ ಎಲ್ಲಾ ವಿಷಯಗಳು "ಕಣ್ಮಣಿ" ಕಥೆಯ ವಿಷಯಗಳಾಗಿವೆ.

ರೇಖಾ ರಾಣಿಯವರ ಕಣ್ಮಣಿ ಕಥೆಯನ್ನು ಯಥಾವತ್ತಾಗಿ ಕದ್ದು ಅಕ್ಕಾ ಧಾರಾವಾಹಿ ಮಾಡಿ, ಅದನ್ನು ಈ ಟಿವಿಯಲ್ಲಿ ಪ್ರಸಾರ ಮಾಡಲು ಧಾರಾವಾಹಿ ತಂಡ ಪ್ರಯತ್ನಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಅಕ್ಕಾ ಧಾರಾವಾಹಿ ಇದೇ ಡಿಸೆಂಬರ್‌ 2 ಸೋಮವಾರದಿಂದ ಪ್ರತಿ ದಿನ ರಾತ್ರಿ 8.30 ಕ್ಕೆ ಪ್ರಸಾರವಾಗಬೇಕಿತ್ತು. ಆದ್ರೆ "ಕೃತಿಚೌರ್ಯ" ಮಾಡಿದ ಆರೋಪ ಹೊತ್ತಿರುವುದರಿಂದ ಮೂಲ ಲೇಖಕಿ ರೇಖಾ ರಾಣಿಯವರ ಮನವಿಯನ್ನು ಪುರಸ್ಕರಿಸಿದ ಸಿಟಿ ಸಿವಿಲ್ ಕೋರ್ಟ್‌ ಅಕ್ಕಾ ಧಾರಾವಾಹಿಯ ಪ್ರಸಾರಕ್ಕೆ ತಡೆ ನೀಡಿದೆ. ಅಂದ್ರೆ ಡಿಸೆಂಬರ್‌ 2 ರಿಂದ ಹೊಸ ಧಾರಾವಾಹಿ ಅಕ್ಕ ಪ್ರಸಾರವಾಗೋದಿಲ್ಲ..!

ವೆಬ್ದುನಿಯಾವನ್ನು ಓದಿ