ಕನ್ನಡಕ್ಕೆ ಕಾಲಿಟ್ಟ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ!

WD
ಅಂತೂ ಕನ್ನಡಕ್ಕೆ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮಮ್ಮುಟ್ಟಿ ಬರುತ್ತಿರುವುದು ಪಕ್ಕಾ ಆಗಿದೆ. ಯುವ ಉತ್ಸಾಹಿ ಸಿನಿಮಾ ನಿರ್ದೇಶಕ ಅಭಯಸಿಂಹ ಮಮ್ಮುಟ್ಟಿ ಅವರನ್ನು ತಮ್ಮ ಚಿತ್ರ 'ಶಿಕಾರಿ'ಗೆ ಕರೆತರುತ್ತಿದ್ದಾರೆ. ಹಿರಿಯ ನಿರ್ಮಾಪಕ ಕೆ. ಮಂಜು ನಿರ್ಮಾಣದ ಸಾರಥ್ಯವನ್ನು ವಹಿಸಿದ್ದಾರೆ.

ಮಂಗಳೂರಿನ ಪ್ರತಿಭೆ ಅಭಯಸಿಂಹ ಇತ್ತೀಚೆಗೆ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆಯ್ನು ಹುಟ್ಟುಹಾಕಿದ್ದರು. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ್ದ ಅಭಯಸಿಂಹ ಅವರ 'ಗುಬ್ಬಚ್ಚಿಗಳು' ಚಿತ್ರ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಭೇಷ್ ಎನಿಸಿಕೊಂಡಿತ್ತು. ನಗರೀಕರಣದಲ್ಲಿ ಕಾಣೆಯಾಗುತ್ತಿರುವ ಗುಬ್ಬಚ್ಚಿಗಳ ಸುತ್ತ ಮಾರ್ಮಿಕ ಪ್ರಶ್ನೆಯೊಂದನ್ನು ಎಸೆದು ಚಿಂತನೆಯನ್ನು ಹುಟ್ಟುಹಾಕುವ ಚಿತ್ರವಾಗಿ ಗುಬ್ಬಚ್ಚಿಗಳು ಗಮನಸೆಳೆದಿತ್ತು.

MOKSHA
ದೇಶದ ಪ್ರತಿಷ್ಠಿತ ಸಂಸ್ಥೆ ಪೂನಾದ ಎಫ್‌ಟಿಐಐನಲ್ಲಿ ಚಲನಚಿತ್ರ ನಿರ್ದೇಶನದಲ್ಲಿ ಪದವಿ ಪಡೆದು ಬಂದಿರುವ ಅಭಯಸಿಂಹ ಈಗ 'ಶಿಕಾರಿ'ಯನ್ನು ಕೈಗೆತ್ತಿಕೊಂಡಿದ್ದಾರೆ. ಶಿಕಾರಿ ಸ್ವಾತಂತ್ರ್ಯಪೂರ್ವ ಭಾರತ ಹಾಗೂ ಸ್ವಾತಂತ್ರ್ಯೋತ್ಸವ ಭಾರತದ ಕುರಿತ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಅಮೋಲ್ ಭಾವೆ ಸಂಗೀತ ಹಾಗೂ ವಿಕ್ರಂ ಶ್ರೀವಾಸ್ತವ್ ಛಾಯಾಗ್ರಹಣವಿದೆ.

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಹಲವು ವರ್ಷಗಳ ಹಿಂದೆಯೇ ಕನ್ನಡಕ್ಕೆ ಬರಲು ಮನಸ್ಸು ಮಾಡಿದ್ದರು. ಆದರೆ ಅವರಿಗೆ ಇಷ್ಟವಾಗುವ ಕಥೆ ಎಲ್ಲೂ ಸಿಗಲಿಲ್ಲವಂತೆ. ವರ್ಷದ ಹಿಂದೆ ಅಭಯಸಿಂಹ ತಮ್ಮ ಶಿಕಾರಿ ಕಥೆಯನ್ನು ಮಮ್ಮುಟ್ಟಿಗೆ ಹೇಳಿದಾಗ ಮಮ್ಮುಟ್ಟಿ ಅವರು ಒಕೆ ಅಂದಿದ್ದರು. ಆದರೆ, ನಿರ್ಮಾಣದ ಜವಾಬ್ದಾರಿ ಹೊತ್ತ ಎನ್.ಆರ್.ಶೆಟ್ಟಿ ಅವರ ಆರ್ಥಿಕ ಸಮಸ್ಯೆಯಿಂದಾಗಿ ಚಿತ್ರ ಆರಂಭದಲ್ಲಿ ಎಡವಿ ಬಿದ್ದಿತ್ತು. ಈಗ ಎನ್.ಆರ್.ಶೆಟ್ಟಿ ಜಾಗಕ್ಕೆ ಹಿರಿಯ ನಿರ್ಮಾಪಕ ಕೆ.ಮಂಜು ಬಂದಿದ್ದಾರೆ.
MOKSHA


ಮಮ್ಮುಟ್ಟಿ ಕನ್ನಡ ಚಿತ್ರದಲ್ಲಿ ನಟಿಸದಿದ್ದರೂ, ಕನ್ನಡ ಸಂಭಾಷಣೆಯನ್ನು ಚಿತ್ರವೊಂದರಲ್ಲಿ ಆಡಿ ಅಭ್ಯಾಸವಿದೆ. ಮಲಯಾಳಂ ಚಿತ್ರವೊಂದರಲ್ಲಿ ಕನ್ನಡ ಭಾಷೆ ಮಾತನಾಡುವ ಪಾತ್ರವೊಂದರಲ್ಲಿ ಅಭಿನಯಿಸಿ ಮಮ್ಮುಟ್ಟಿ ಅವರಿಗೆ ಗೊತ್ತಿದೆ.

ಈಗ ನಿರ್ಮಾಪಕ ಸ್ಥಾನ ಪಕ್ಕಾ ಆಗುವುದರೊಂದಿಗೆ ಅಭಯಸಿಂಹ ಅವರು ಕೇರಳದ ಪೊಳ್ಳಾಚಿಗೆ ಹೋಗಿ ಮಮ್ಮುಟ್ಟಿ ಅವರೊಂದಿಗೆ ಮತ್ತೆ ಮಾತನಾಡಿಕೊಂಡು ಬಂದಿದ್ದಾರೆ. ಮಮ್ಮುಟ್ಟಿ ಒಕೆ ಅಂದಿದ್ದಾರೆ. ಚಿತ್ರಕ್ಕೆ ಇನ್ನೂ ಮಮ್ಮುಟ್ಟಿ ಡೇಟ್ಸ್ ಅಂತಿಮವಾಗಿಲ್ಲ. ವರ್ಷಾಂತ್ಯದೊಳಗೆ ಚಿತ್ರ ಬೆಂಗಳೂರಿನಲ್ಲೇ ಮಹೂರ್ತ ಕಾಣಲಿದೆ.

ವೆಬ್ದುನಿಯಾವನ್ನು ಓದಿ