ಕಾಲಿವುಡ್ ಗೆ ಕೃಷ್ಣ ಸುಂದರಿ ಪ್ರಿಯಾಮಣಿ ಗುಡ್ ಬೈ ?

ಸೋಮವಾರ, 24 ಫೆಬ್ರವರಿ 2014 (11:17 IST)
PR
ದಕ್ಷಿಣ ಭಾರತದ ಸೆಕ್ಸಿ ನಟಿಯರ ಪಟ್ಟಿಗೆ ಪ್ರಿಯಾಮಣಿ ಸಹ ಸೇರ್ಪಡೆ ಆಗಿದ್ದಾರೆ. ಬಿಚ್ಚು ಬಟ್ಟೆಯ ಈ ಹುಡುಗಿ ಆರಂಭದಲ್ಲಿ ತನ್ನ ಭವಿಷ್ಯ ಚಿತ್ರರಂಗದಲ್ಲಿ ಪರೀಕ್ಷಿಸಲು ಹೊರಟಿದ್ದು ತಮಿಳು ಚಿತ್ರಗಳ ಮುಖಾಂತರ. ಕಾಲಿವುಡ್ ಗೆ ಎಂಟ್ರಿ ಆದ ಈ ಚೆಲುವೆ ಆ ನಂತರ ಎಲ್ಲ ಇಂಡಸ್ಟ್ರಿ ಯಲ್ಲು ತನ್ನ ಪ್ರತಿಭೆ ತೋರಿದರು . ಆಕೆ ನಟಿಸಿದ ಪರುತ್ತಿವೀರನ್ ಚಿತ್ರದ ನಟನೆಗೆ ಆಕೆಗೆ ನ್ಯಾಷನಲ್ ಅವಾರ್ಡ್ ಸಹ ದೊರಕಿದೆ.

ಇದೆಲ್ಲ ಹೇಗೆ ಇದ್ದರು, ಈಕೆಗೆ ಹೆಚ್ಚಾಗಿ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಅವಕಾಶಗಳು ಹೇರಳವಾಗಿ ದೊರಕಿತು. ಆದರೆ ತಮಿಳು ಚಿತ್ರರಂಗದತ್ತ ಆಕೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಲೇ ಇಲ್ಲ ಎಂದೇ ಹೇಳ ಬಹುದಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಇತ್ತೀಚಿಗೆ ಆಕೆ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದಾರೆ.

PR
ಒಂದು ಬಗೆಯಲ್ಲಿ ಹೇಳುವುದಾದರೆ ಈಕೆಗೆ ಕಾಲಿವುಡ್ ಸಹ ನಿನಗೇನೂ ಇಲ್ಲಿ ಕೆಲಸ ಇಲ್ಲ ಎಂದು ಹೇಳಿ ಆಕೆಗೆ ಬಾಗಿಲು ತೋರಿದೆ ಎನ್ನುತ್ತಿದೆ ಒಂದು ಮಾಹಿತಿ. ಟಾಲಿವುಡ್ , ಸ್ಯಾಂಡಲ್ ವುಡ್ ನಿಂದ ಆಕೆಗೆ ಹೆಚ್ಚಿನ ಅವಕಾಶಗಳು ದೊರೆಯುವಾಗ ಆಕೆ ಕಾಲಿವುಡ್ ನಲ್ಲಿ ದೊರೆತ ಅವಕಾಶಗಳ ಕಡೆಗೆ ಗಮನ ನೀಡಲಿಲ್ಲವಂತೆ .

ಅಷ್ಟೇ ಅಲ್ಲದ ಆ ಇಂಡಸ್ಟ್ರಿ ಯಿಂದ ಬಂದ ಅವಕಾಶಗಳನ್ನು ನೆಗ್ಲೆಕ್ಟ್ ಮಾಡಿದ್ದು ಅಲ್ಲದೆ, ಚಿತ್ರದ ನಿರ್ಮಾಪಕರನ್ನು ಅಪಮಾನಿಸಿದ್ರು ಎನ್ನುವ ಸುದ್ದಿ ಬಿಸಿಯಾಗಿ ಹರಡಿದೆ.ಈ ಎಲ್ಲ ಗಾಸಿಪ್ ಗಳಿಂದ ದೂರ ಬರ ಬೇಕು ಎಂದು ನಿರ್ಧರಿಸಿ ಆಕೆ ಕಾಲಿವುಡ್ ಗೆ ಬೈ ಹೇಳಿದ್ದಾರಂತೆ .. !

ವೆಬ್ದುನಿಯಾವನ್ನು ಓದಿ