ಕಿಟ್ಟಿ, ಶರ್ಮಿಳಾ, ದಿಗಂತರ 'ಸ್ವಯಂವರ'ದ ನಂಟು

MOKSHA
ಕನ್ನಡದಲ್ಲೊಂದು ಸ್ವಯಂವರ ಆರಂಭವಾಗಿದೆ. ಆದರೆ ಇಲೇಶ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ರಾಖಿ ಸಾವಂತ್ ಮಾತ್ರ ಕನ್ನಡನಾಡಿನಲ್ಲಿ ಸ್ವಯಂವರ ಮಾಡಲು ಬರುತ್ತಿಲ್ಲ. ಹಾಗಿದ್ದರೆ ಸ್ವಯಂವರ ಯಾರದ್ದು ಎಂದು ತಲೆಕೆಡಿಸಿಕೊಳ್ಳಬೇಡಿ.

ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ಸ್ವಯಂವರ ಅನ್ನೋದು ಸಿನಿಮಾ. ಸಿನಿಮಾಕ್ಕೆ ರಾಖಿಯೇ ಸ್ವೂರ್ತಿಯೋ ಗೊತ್ತಿಲ್ಲ. ಚಿತ್ರದಲ್ಲಿ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಅಭಿನಯಿಸಲಿದ್ದಾರೆ. ನಾಯಕ ನಟರಾಗಿ ಶ್ರೀನಗರ ಕಿಟ್ಟಿ, ದಿಗಂತ್ ಅಭಿನಯಿಸಲಿದ್ದಾರೆ.

ಈ ಹಿಂದೆ ಸ್ವಯಂವರಕ್ಕೆ ಹಾಡುಗಳನ್ನು ಐವರು ನಿರ್ದೇಶಕರು ಬರೆಯಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದ ಗಲ್ಲಿಯಿಂದ ಕೇಳಿ ಬರುತ್ತಿತ್ತು. ಆದರೆ ಈಗ ಆ ಹಾಡುಗಳನ್ನು ಬರೆಯುವವರಲ್ಲಿ ಸಣ್ಣ ಬದಲಾವಣೆಯಾಗಲಿದೆ.

ಪ್ರೇಮ್, ಯೋಗರಾಜ್ ಭಟ್, ಎ.ಪಿ ಅರ್ಜುನ್, ನಾಗೇಂದ್ರ ಪ್ರಸಾದ್ ಮತ್ತು ತುಷಾರ್ ರಂಗನಾಥ್ ನಿಜವಾಗಿ ಈ ಹಿಂದೆ ಹಾಡುಗಳನ್ನು ಬರೆಯಬೇಕಿತ್ತು. ಆದರೆ ಪ್ರೇಮ್ ಅವರ ಸ್ಥಾನವನ್ನು ಸುಧೀರ್‌ರಾಜ್ ತುಂಬಿಸಲಿದ್ದಾರೆ. ಸುಧೀರ್ ಸದ್ಯಕ್ಕೆ ನಿರ್ದೇಶಕ ಆಗಿರದಿದ್ದರೂ ಮುಂದೆ ಶ್ರೀನಗರ ಕಿಟ್ಟಿಯ ದ್ವಿ ಪಾತ್ರದ ಸಿನಿಮಾಕ್ಕೆ ಭಾವಿ ನಿರ್ದೇಶಕರಾಗಲಿರುವ ಕಾರಣಕ್ಕೆ ಸ್ವಯಂವರಕ್ಕೆ ಹಾಡು ಬರೆಯಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ