ಕಿನ್ನರ ಜಗತ್ತಿಗೊಂದು ಕಿನ್ನರ ಬಾಲೆ

MOKSHA
ಕಿನ್ನರ ಬಾಲೆ ಎನ್ನುವ ಮತ್ತೊಂದು ಮಕ್ಕಳ ಚಿತ್ರ ಬಂದಿದೆ .ಇದನ್ನು ನಿರ್ದೇಶಿಸುವವರು ಸಧಬಿರುಚಿಯ ಚಿತ್ರಗಳನ್ನು ಜನತೆಗೆ ಕೊಟ್ಟು ಇತ್ತೀಚೆಗೆ 4 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ವಿಶ್ವನಾಥ್.

ಇಬ್ಬರು ಪುಟ್ಟ ಮಕ್ಕಳ ಸುತ್ತ ಹರಿದಾಡುವ ಈ ಚಿತ್ರವು ಒಂದು ಕಲಾತ್ಮಕ ಚಿತ್ರ. ಬಡ ಬಾಲಕಿಯೊಬ್ಬಳು ತನ್ನ ನೋವನ್ನು ಮರೆತು ಇನ್ನೊಂದು ಬಾಲಕಿಯ ನೋವಿಗೆ ಸ್ಪಂದಿಸುವುದೇ ಈ ಚಿತ್ರದ ಮಾನವೀಯ ಎಳೆ. ಮೂಕ ಬಾಲಕಿಯನ್ನು ಕಾಮುಕರ ಕೈಯಿಂದ ರಕ್ಷಿಸಲು ಬಡ ಹುಡುಗಿ ಮಾಡುವ ಕಸರತ್ತು, ಹಸಿದ ಹೊಟ್ಟೆಯನ್ನು ತುಂಬಿಸಲು ಮಾಡುವ ಕೆಲಸ ಇವೆಲ್ಲವು ಚಿತ್ರದಲ್ಲಿ ಮೇಳೈಸಿವೆ.

ಈ ಚಿತ್ರಕ್ಕೆ ಜಾನಕಿ ಸುಂದರೇಶ್ ಅವರ ಕಥೆಯನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ರಮೇಶ್ ಭಟ್, ಬಾಲಕಿಯರ ಪಾತ್ರದಲ್ಲಿ ಮಧುಶ್ರೀ ಹಾಗೂ ಶ್ರೇಯಾ ಅಭಿನಯಿಸಿದ್ದರೆ. ದಾಮೋದರ್ ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿದ್ದಾರೆ. ಅವರ ದೃಷ್ಟಿಯಲ್ಲಿ ಚಿತ್ರ ಸಾಹಿತ್ಯ ಬರೆಯುವುದು ಚಾಲೆಂಜಿಂಗ್ ವಿಷಯವಂತೆ.

ವೆಬ್ದುನಿಯಾವನ್ನು ಓದಿ