ಕೈರೋಗೆ 'ಮುಖಪುಟ'ದ ದಿಗ್ವಿಜಯ ಯಾತ್ರೆ!

MOKSHA
ಈಗಾಗಲೇ ವಿದೇಶಗಳ ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು, ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡು ಭೇಷ್ ಎನಿಸಿಕೊಂಡಿರುವ ಬೆನ್ನಲ್ಲೇ ಇದೀಗ ಈಜಿಫ್ಟ್‌ನಲ್ಲಿ ನಡೆಯಲಿರುವ ಪ್ರತಿಷ್ಟಿತ ಕೈರೋ ಚಲನಚಿತ್ರೋತ್ಸವಕ್ಕೆ ಕನ್ನಡದ ಮುಖಪುಟ ಚಿತ್ರ ಆಹ್ವಾನ ಪಡೆದಿದೆ.

ರೂಪ ಅಯ್ಯರ್ ನಿರ್ದೇಶಿಸಿರುವ ಕನ್ನಡದ ಮುಖಪುಟ ಚಿತ್ರ ತನ್ನ ವಿಜಯದ ಬಾವುಟವನ್ನು ವಿದೇಶಗಳಲ್ಲಿ ಹಾರಿಸಿ ತನ್ನ ಮುಂದಿನ ಪಯಣದ ಹಾದಿಯನ್ನು ಕೈರೋದತ್ತ ತಿರುಗಿಸಿದೆ. ಈ ಕೈರೋ ಚಿತ್ರೋತ್ಸವದಲ್ಲಿ ರೂಪ ಅಯ್ಯರ್ ಕೂಡಾ ಭಾಗವಹಿಸಲಿದ್ದಾರೆ.

ಕೈರೋದ ಬಳಿಕ ಮುಖಪುಟ ಚಿತ್ರ ತನ್ನ ದಿಗ್ವಿಜಯ ಯಾತ್ರೆಯನ್ನು ಮುಂದುವರಿಸಿ ದಕ್ಷಿಣಾ ಆಫ್ರಿಕಾ, ಥಾಯ್‌ಲ್ಯಾಂಡ್, ವೇಲ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಇತ್ತೀಚಿಗೆ ಐರ್ಲೆಂಡ್ ಚಿತ್ರೋತ್ಸವದಲ್ಲಿ ಮುಖಪುಟವು ಪ್ರದರ್ಶನ ಕಂಡು ಅಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ನಾರಾಯಣ್ ಹೊಸ್ಮನೆ, ಚಿತ್ರ ಆರಂಭಿಸುವಾಗ ರೂಪಾ ಅಯ್ಯರ್ ಅವರು ಕೊಟ್ಟ ಭರವಸೆಗಳೆಲ್ಲವು ಈಗ ನಿಜವಾಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ. ಹಾಗೂ ಚಿತ್ರದ ಸಂಪೂರ್ಣ ಯಶಸ್ಸು ರೂಪಾ ಅವರಿಗೇ ಸಲ್ಲಬೇಕೆಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ