ಕೋಮಲ್ ಹೊಸ ಚಿತ್ರದ ಹೆಸರೇ 'ಪ್ಯಾರ್ಗೆ ಆಗ್ಬುಟ್ಟೈತೆ'!

ಸೋಮವಾರ, 6 ಮೇ 2013 (14:02 IST)
PR
PR
ಅತ್ತ ದರಿ, ಇತ್ತ ಪುಲಿ ಎಂಬಂತಿದ್ದ ಕೋಮಲ್ ಕುಮಾರ್‌ಗೆ ಜೀವಜಲವಾಗಿದ್ದು 'ಗೋವಿಂದಾಯ ನಮಃ' ಚಿತ್ರ. ಅದರಲ್ಲೂ ಆ ಚಿತ್ರದ 'ಪ್ಯಾರ್ಗೆ ಆಗ್ಬುಟ್ಟೈತೆ' ಹಾಡು ದೊಡ್ಡ ಕ್ರೇಜ್ ಸೃಷ್ಟಿಸಿ, ಕೋಮಲ್ ಜನಪ್ರಿಯರಾಗಿದ್ದರು. ಅವರಿಗಿಂತಲೂ ಹೆಚ್ಚು ಪಾರುಲ್ ಜನಪ್ರಿಯರಾಗಿದ್ದರು. ಈಗ ಅದೇ ಹೆಸರಿನ ಚಿತ್ರ ಶುರುವಾಗಿದೆ!

ಚಿತ್ರದ ಹೆಸರೇ 'ಪ್ಯಾರ್ಗೆ ಆಗ್ಬುಟ್ಟೈತೆ'. ಕೋಮಲ್ ನಾಯಕ. ಆದರೆ ಆ ಹಾಡಿನಲ್ಲಿ ಕುಣಿದಿದ್ದ ಪಾರುಲ್ ಯಾದವ್ ನಾಯಕಿಯಲ್ಲ. ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

ಚಿತ್ರವನ್ನು ನಿರ್ದೇಶಿಸುತ್ತಿರುವುದು ತಮಿಳು ನಿರ್ದೇಶಕ ಕವಿನ್ ಬಾಲಾ. ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬಾಲಾ ಅವರಿಗೆ ಕನ್ನಡ ಹೊಸತು. ಇನ್ನು ಧರ್ಮ ತೇಜ ಸಂಗೀತ, ಬಾಲಾ ಭರಣಿ ಛಾಯಾಗ್ರಾಹಕರು. ರಕ್ಷಿತ್ ಫಿಲ್ಮ್ಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ನಿರ್ಮಿಸುತ್ತಿರುವುದು ಶೋಭಾ ಪ್ರಕಾಶ್.

ಬೆಂಗಳೂರು, ಮೈಸೂರು, ಮಡಿಕೇರಿ, ಸಕಲೇಶಪುರ, ಉಡುಪಿ ಮತ್ತಿತರ ಕಡೆ ಚಿತ್ರೀಕರಣ ನಡೆಯಲಿದೆ. ಶೀಘ್ರದಲ್ಲೇ ನಾಯಕಿ ಸೇರಿದಂತೆ ಇತರೆ ಪಾತ್ರವರ್ಗದ ಆಯ್ಕೆ ಮುಗಿಯಲಿದೆ. ನಂತರ ಚಿತ್ರೀಕರಣ ಶುರು.

'ಪ್ಯಾರ್ಗೆ ಆಗ್ಬುಟ್ಟೈತೆ' ಚಿತ್ರದ ಕಥೆ ಏನು ಎಂಬುದು ಬಹಿರಂಗವಾಗಿಲ್ಲ.

ವೆಬ್ದುನಿಯಾವನ್ನು ಓದಿ